ಐಸಿಸಿ ಟಾರ್ಗೆಟ್: ಓರ್ವ ಉಗ್ರನ ಹತ್ಯೆ

0
271

ರಾಷ್ಟ್ರೀಯ ಪ್ರತಿನಿಧಿ ವರದಿ
ವಿಶ್ವದ ವಿವಿಧ ದೇಶಗಳಲ್ಲಿ ತಮ್ಮ ಪ್ರಭಾವನ್ನು ಬೀರುತ್ತಿರುವ ಐಸಿಸ್ ಉಗ್ರರ ಸಂಘಟನೆ ಭಾರತದಲ್ಲೂ ತನ್ನ ಪ್ರಭಾವವನ್ನು ತೋರಿಸಲು ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿ ಐಸಿಸ್ ಉಗ್ರದ ದಾಳಿ ನಡೆದಿದೆ.
 
 
 
ಮಂಗಳವಾರ ಲಖ್ನೋದಲ್ಲಿ ಶಂಕಿತ ಐಸಿಸ್ ಉಗ್ರನ ಹತ್ಯೆ ಮಾಡಲಾಗಿದೆ. ಉತ್ತರಪ್ರದೇಶದ ಎಟಿಎಸ್ ಕಮಾಂಡೋ ಕಾರ್ಯಾಚರಣೆ ನಡೆಸಿ ಉಗ್ರನನ್ನು ಹತ್ಯೆ ಮಾಡಿದ್ದಾರೆ.
 
 
 
ಭಾರತದ ಮೇಲೆ ದಾಳಿ ನಡೆಸಲು ಐಸಿಸ್ ಏಷ್ಯಾ ಶಾಖೆ ಖೊರಸಾನ್ ಸಂಜು ರೂಪಿಸಿತ್ತು. ಈಗಾಗಲೇ ಎಟಿಎಸ್ ಕಮಾಂಡೋ 6 ಉಗ್ರರನ್ನು ಬಂಧಿಸಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ.
 
 
 
ಬಂಧಿತರಿಂದ 8 ಪಿಸ್ತೂಲ್, ಐಸಿಸ್ ಧ್ವಜಗಳು, ಅಪಾರ ಶಸ್ತ್ರಾಸ್ತ್ರ, ಬಾಂಬ್ ತಯಾರಿ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರರ ಜತೆಗಿದ್ದ ಭಾರತ-ಇಸ್ರೇಲ್ ಧ್ವಜಗಳನ್ನು ವಶಪಡಿಸಲಾಗಿದೆ.
 
 
 
ನಿನ್ನೆ ಉತ್ತರ ಪ್ರದೇಶದ ಠಾಕೂರ್‌ಗಂಜ್ ನಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರ ಸೈಫುಲ್ ವಿರುದ್ಧ ಭಯೋತ್ಪಾದನೆ ನಿಗ್ರಹ ದಳದ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ್ದರು. ಉಗ್ರ ಶರಣಾಗತಿಗೆ ಸೂಚಿಸಿದರೂ ಹುತಾತ್ಮನಾಗುವೆ ಎಂದಿದ್ದ. ಹತ್ಯೆಯಾದ ಶಂಕಿತ ಐಸಿಸ್ ಉಗ್ರನ ಬಳಿ 1.50ಲಕ್ಷ ನಗದಿ, 45 ಗ್ರಾಂ ಚಿನ್ನ ಹಾಗೂ ಐಸಿಸ್ ಬಾವುಟ ಕೂಡ ಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here