ಸ್ಪೋರ್ಟ್ಸ್ ಪ್ರತಿನಿಧಿ ವರದಿ
ನೂತನ ಟೆಸ್ಟ್ ಬೌಲಿಂಗ್ ರ್ಯಾಕಿಂಗ್ ನಲ್ಲಿ ಭಾರತದ ಆಫ್ ಸ್ಪಿನ್ನರ್ ಆರ್ ಆಶ್ವಿನ್ ಎರಡನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಟೆಸ್ಟ್ ಆಲ್ ರೌಂಡರ್ ಗಳ ಯಾದಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಇಂಗ್ಲೆಂಡ್ ನ ತಂಡದ ಸ್ಟುವರ್ಟ್ ಬ್ರಾಡ್ ನಂ.1 ಸ್ಥಾನಕ್ಕೇರಿದ್ದಾರೆ. ಅಶ್ವಿ್ನ ಮತ್ತು ಸ್ಟುವರ್ಟ್ ನಡುವೆ ಭಾರಿ ಪೈಪೋಟಿ ಇದ್ದು, ಇವರಿಬ್ಬರ ನಡುವೆ ಕೇವಲ ಒಂದು ಅಂಕ ಮಾತ್ರ ವ್ಯತ್ಯಾಸವಿದೆ. ಅಶ್ವಿನ್ 871 ಅಂಕ ಗಳಿಸಿದ್ದು, ಟಾಪ್-10 ಯಾದಿಯಲ್ಲಿ ಭಾರತದ ಮತ್ತೋರ್ವ ಬೌಲರ್ ರವೀಂದ್ರ ಜಡೇಜ 789 ಅಂಕ ಗಳಿಸಿ 6ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡಿನ ವೇಗಿ ಜೇಮ್ಸ್ ಆ್ಯಂಡರ್ ಸನ್ ಮೂರನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಯಾಸಿರ್ ಶಾ 4ನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ 5ನೇ ಸ್ಥಾನದಲ್ಲಿದ್ದಾರೆ. 7ನೇ ಸ್ಥಾನದಲ್ಲಿ ಟ್ರೆಂಟ್ ಬೌಲ್ಟ್, 8ನೇ ಸ್ಥಾನದಲ್ಲಿ ಜೊಶ್ ಹ್ಯಾಝಲ್ ವುಡ್, 9ನೇ ಸ್ಥಾನದಲ್ಲಿ ಮಾರ್ನೆ ಮಾರ್ಕೆಲ್ ಮತ್ತು ವೆರ್ನರ್ ಫಿಲಾಂಡರ್ 10ನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಸಾಧನೆ
ಐಪಿಎಲ್ ನಲ್ಲಿ ಪುಣೆ ಸೂಪರ್ ಜೇಂಟ್ಸ್ ಆಟಗಾರ ರವಿಚಂದ್ರನ್ ಅಶ್ವಿನ್ 111 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. ಪಂಜಾಬ್ ಇಲೆವನ್ ವಿರುದ್ಧದ ಪಂದ್ಯದಲ್ಲಿ ಅಶ್ವಿನೆ ಸಾಧನೆ ಮಾಡಿದ್ದಾರೆ.