ಐಸಿಎಸ್ ಸಿ ಮರು ಪರೀಕ್ಷೆಗೆ ಒತ್ತಾಯ

0
424

ನಮ್ಮ ಪ್ರತಿನಿಧಿ ವರದಿ
ಐಸಿಎಸ್ ಸಿ ಪಠ್ಯಕ್ರಮದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ ನಡೆದ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಲೋಪದೋಷಗಳಿಂದಾಗಿ ಆಗಿರುವ ತೀವ್ರ ತೊಂದರೆಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತೇನೆ.
 
 
ಕನ್ನಡ ಭಾಷಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ಪದಗಳ ಕಗ್ಗೊಲೆಯಾಗಿರುವುದು ಬಹಳ ನೋವಿನ ಸಂಗತಿ. ಈ ಲೋಪದಿಂದಾಗಿ ವಿದ್ಯಾರ್ಥಿಗಳು ಪದಗಳ ಅರ್ಥ ತಿಳಿಯದೇ ಗೊಂದಲ ಉಂಟಾಗಿ ಉತ್ತರ ಬರೆಯಲಾಗದೆ ವಂಚಿತರಾಗಿರುವುದು ವಿಷಾದನೀಯ.
 
 
 
 
ಪ್ರಶ್ನೆಪತ್ರಿಕೆಯಲ್ಲಿ ಎಂಬ, ನೆಂಟ, ನಿಮಗುಂಟಾದ ಸೇರಿ ಅನೇಕ ಪದಗಳು ಸರಿಯಾಗಿ ಮುದ್ರಣಗೊಳ್ಳದೆ ಎಬ, ನೆಟ, ನಿಮಗುಟಾದ – ಹೀಗೆ ಮುದ್ರಣ ದೋಷದಿಂದಾಗಿ ವಿದ್ಯಾರ್ಥಿಗಳ ಅಂಕಗಳು ಕಡಿಮೆಯಾಗುವುದು ಖಂಡನಾರ್ಹ. ಕೂಡಲೇ ಸಂಬಂಧಿಸಿದ ಇಲಾಖೆಗಳು, ಐಸಿಎಸ್ಸಿ ಮಂಡಳಿ ಈ ತಪ್ಪುಗಳನ್ನು ಸರಿಪಡಿಸಿ ಐಸಿಎಸ್ ಸಿ ಕನ್ನಡ ಭಾಷಾ ಪರೀಕ್ಷೆಯನ್ನು ಪುನಃ ಏರ್ಪಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸುತ್ತದೆ.

LEAVE A REPLY

Please enter your comment!
Please enter your name here