ಐಶ್ವರ್ಯಾ ರೈ ಗೆ ಮತ್ತೊಂದು ಗರಿ

0
234

 
ಸಿನಿ ಪ್ರತಿನಿಧಿ ವರದಿ
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. 2016ನೇ ಸಾಲಿನ ಗ್ಲೋಬಲ್ ಇಂಡಿಯನ್ ಅವಾರ್ಡ್ ಗೆ ಐಶ್ ಪಾತ್ರವಾಗಿದ್ದಾರೆ.
 
ಮುಂಬೈನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರಿಗೆ ಗ್ಲೋಬಲ್ ಇಂಡಿಯನ್ ಅವಾರ್ಡ್ ನೀಡಿ ಪುರಸ್ಕರಿಸಲಾಯ್ತು. ಇದೇ ವೇಳೆ ಮಾತನಾಡಿದ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಡೀ ಭಾರತದ ಮಹಿಳೆಯರನ್ನು ಪ್ರತಿನಿಧಿಸಲು ನನಗೆ ಇದೊಂದು ಅವಕಾಶ. ಅಲ್ಲದೇ ನಾನು ಸಿನಿಮಾ ರಂಗವನ್ನು ಆಯ್ಕೆ ಮಾಡಿಕೊಂಡಿರೋದಕ್ಕೆ ನನಗೆ ತುಂಬಾನೇ ಖುಷಿಯಾಗುತ್ತಿದೆ. ಕೇವಲ ನಟಿಯಾಗಿ ಮಾತ್ರವಲ್ಲದೇ ಬೇರೆ ರೀತಿಯಲ್ಲೂ ನನಗೆ ಅನೇಕ ಅವಕಾಶಗಳು ಸಿಗುತ್ತಿವೆ ಎಂದು ಹೇಳಿದ್ದಾರೆ.
 
 
ಐಶ್ವರ್ಯಾ ರೈ ಅವರು ತಮಗೆ ದೊರೆತಿರುವ ಗ್ಲೋಬಲ್ ಇಂಡಿಯನ್ ಅವಾರ್ಡ್ ನ ತನ್ನ ಮುದ್ದಿನ ಮಗಳು ಆರಾಧ್ಯ ಬಚ್ಚನ್ ಗೆ ಅರ್ಪಿಸಿದ್ದಾರೆ. ಆ ಮೂಲಕ ಮಗಳ ಮೇಲಿನ ತಮ್ಮ ಪ್ರೀತಿಯನ್ನು ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here