ಐಬಿಎಂ ಸರ್ಟಿಫಿಕೇಟ್ ಕೋರ್ಸ್

0
250
????????????????????????????????????

ಬೆಂಗಳೂರು ಪ್ರತಿನಿಧಿ ವರದಿ
ಗೀತಂ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ನಲ್ಲಿ ಐಬಿಎಂ ಸರ್ಟಿಫಿಕೇಟ್ ಕೋರ್ಸ್ ಗಳ ಕುರಿತು ಸಂವಾದ ನಡೆಯಿತು.
 
 
ಕಾರ್ಯಕ್ರಮದಲ್ಲಿ ಐಬಿಎಂ ಸಿಸ್ಟಂ ವಿಶ್ವವಿದ್ಯಾಲಯದ ಬ್ಯುಸಿನೆಸ್ ಡೆವಲಪ್ಮೆಂಟ್ ಆಂಡ್ ಇಕೋಸಿಸ್ಟಮ್ಸ್ ನ ಜಿಎಂಯು ಮುಖ್ಯಸ್ಥ (ಗ್ರೋತ್ ಮಾರ್ಕೆಟ್ ಯೂನಿಟ್) ಹರಿ ರಾಮಸುಬ್ರಹ್ಮಣ್ಯನ್ ಮತ್ತು ಸಿಎಲ್ ಇನ್ಫೋಟೆಕ್ ಪ್ರೈ. ಲಿಮಿಟೆಡ್ನ ಸಿಇಒ ಬಿ ಈಶ್ವರ್, ಕಂಪ್ಯೂಟರ್ ಸೈನ್ಸ್ ಆಂಡ್ ಎಂಜಿನಿಯರಿಂಗ್ (ಸಿಎಸ್ಇ) ಮತ್ತು ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ (ಇಸಿಇ) ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಐಬಿಎಂ ಸರ್ಟಿಫಿಕೇಶನ್ ಕೋರ್ಸ್ ಗಳ ಅವಶ್ಯಕತೆಯ ಕುರಿತು ಮಾಹಿತಿ ನೀಡಿದರು.
 
 
 
ಇತ್ತೀಚಿನ ತಂತ್ರಜ್ಞಾನಗಳ ಕುರಿತು ಕಲಿತುಕೊಳ್ಳುವ ಅಗತ್ಯತೆ ಅದರಿಂದ ಯಾವ ರೀತಿ ಹೆಚ್ಚಿನ ಉದ್ಯೋಗಾವಕಾಶ ಲಭಿಸುತ್ತದೆ ಎಂದವರು ವಿವರಿಸಿದರು. ವಿದ್ಯಾರ್ಥಿಗಳಿಗೆ ಕೇವಲ ಉದ್ಯೋಗ ಸಿಗುವುದು ಮಾತ್ರವಲ್ಲ ಐಟಿ ಕ್ಷೇತ್ರದಲ್ಲಿ ದೀರ್ಘಾವಧಿ ಕೆಲಸ ಉಳಿಸಿಕೊಂಡು ಉದ್ಯೋಗ ಭವಿಷ್ಯದಲ್ಲಿ ಯಶಸ್ವಿಯಾಗಿ ಮೇಲೇರಲು ಇದು ಅತ್ಯಗತ್ಯ ಎಂದರು.
 
 
 
ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯೋಗ ಕ್ಷೇತ್ರದ ನಡುವಿನ ಅಂತರವನ್ನು ಹೋಗಲಾಡಿಸಲು ಐಬಿಎಂ ತೆಗೆದುಕೊಂಡ ಈ ಕ್ರಮ ಯಾವ ರೀತಿ ವಿದ್ಯಾರ್ಥಿಗಳಿಗೆ ಲಾಭ ತಂದುಕೊಡಲಿದೆ ಎಂದು ಅವರು ವಿವರಿಸಿದರು.
 
 
ಕಾರ್ಯಕ್ರಮದಲ್ಲಿ ಗೀತಂ ವಿವಿ ಬೆಂಗಳೂರು ಕ್ಯಾಂಪಸ್ನ ಸಹಾಯಕ ಉಪ ಕುಲಪತಿ ಪ್ರೊ. ಶಿವ ಪುಲ್ಲಯ್ಯ, ಸ್ಕೂಲ್ ಆಫ್ ಟೆಕ್ನಾಲಜಿಯ ನಿರ್ದೇಶಕರಾದ ಪ್ರೊ. ವಿಜಯ ಭಾಸ್ಕರ್ ರಾಜು, ಸಹಾಯಕ ಪ್ರಿನ್ಸಿಪಾಲ್ ಪ್ರೊ. ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here