ಪ್ರಮುಖ ಸುದ್ದಿವಾರ್ತೆವಿದೇಶ

ಐಫೋನ್ ಮಾರಾಟ ಭಾರೀ ಕುಸಿತ

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಇತಿಹಾಸದಲ್ಲಿ ಮೊದಲ ಬಾರಿಗೆ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಆ್ಯಪಲ್‌ ಕಂಪೆನಿಯ ಐಫೋನ್‌ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದರ ಜತೆಗೆ ವರಮಾನ ಕೂಡ ಕಡಿಮೆಯಾಗಿದೆ. ಈ ಬೆಳವಣಿಗೆಗಳು ಮಾರುಕಟ್ಟೆಯಲ್ಲಿ ಭಾರಿ ಅಚ್ಚರಿಗೆ ಕಾರಣವಾಗಿವೆ.
 
 
ಆ್ಯಪಲ್​ನ 9 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಪೋನ್ ಮಾರಾಟದಲ್ಲಿ ಕುಸಿತ ಕಂಡು ಬಂದಿದ್ದು, ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ಮಾರಾಟದಲ್ಲಿ ಶೇ.20ರಷ್ಟು ಕಡಿತವಾಗಿದೆ. ಅಲ್ಲದೆ 13 ವರ್ಷಗಳಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಂಪೆನಿಯ ಆದಾಯ ಕೂಡ ಕುಸಿದಿದ್ದು, ಪ್ರಸಕ್ತ ವರ್ಷ 6 ಬಿಲಿಯನ್ ಡಾಲರ್ ಗೆ ಆದಾಯ ಕುಸಿದಿದೆ.
 
 
 
ಇನ್ನು ಆ್ಯಪಲ್ ಸಂಸ್ಥೆ ತನ್ನ ಖ್ಯಾತ ಆ್ಯಪಲ್ ಮೂಸಿಕ್ಸ್ ಗ್ರಾಹಕರನ್ನು 13 ಮಿಲಿಯನ್ ಗೆ ಏರಿಸಿಕೊಂಡಿದ್ದರೂ, ಐಫೋನ್ ಮಾರಾಟದ ಮೇಲೆ ಪರಿಣಾಮ ಬೀರುವಲ್ಲಿ ಇದು ವಿಫಲವಾಗಿದೆ. ಆ್ಯಪಲ್ ಇತರೆ ಉತ್ಪನ್ನಗಳಾದ ಮ್ಯಾಕ್, ಐಮ್ಯಾಕ್ ಮತ್ತು ಐಪಾಡ್ ಗಳ ಮಾರಾಟದಲ್ಲೂ ಕಡಿತ ಕಂಡುಬಂದಿದೆ. ಚೀನಾದಲ್ಲಿ ಆ್ಯಪಲ್ ಸಂಸ್ಥೆಯ ಮಾರಾಟ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಕುಸಿದಿದೆ.
 
 
 
 
ಮಾರ್ಚ್‌ಗೆ ಕೊನೆಗೊಂಡ 2015–16ನೇ ಕೊನೆಯ ತ್ರೈಮಾಸಿಕದಲ್ಲಿ ಐದು ಕೋಟಿ ಐಫೋನ್‌ ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಆರು ಕೋಟಿ ಐಫೋನ್‌ ಮಾರಾಟವಾಗಿದ್ದವು. ಇದರಿಂದ ಐಫೋನ್‌ ಮಾರಾಟ ಒಂದು ಕೋಟಿಯಷ್ಟು ಕಡಿಮೆಯಾಗಿದೆ.
 
 
2007ರಿಂದ ಐಫೋನ್‌ ತಯಾರಿಕೆ ಆರಂಭಿಸಿದ ನಂತರ ಎಂದೂ ಈ ಪ್ರಮಾಣದಲ್ಲಿ ಮಾರಾಟ ಕುಸಿದಿರಲಿಲ್ಲ. ವರ್ಷದಿಂದ ವರ್ಷಕ್ಕೆ ಐಫೋನ್‌ ಮಾರಾಟ ಕುಸಿತ ಕಾಣುತ್ತಿರುವುದನ್ನು ಕಂಪೆನಿ ಒಪ್ಪಿಕೊಂಡಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here