ಐಪಿಎಲ್ ನಿಂದ ಹೇಸ್ಟಿ೦ಗ್ಸ್ ಹೊರಕ್ಕೆ

0
465

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಗಾಯದ ಸಮಸ್ಯೆಯಿ೦ದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಆಲ್‍ರೌ೦ಡರ್ ಜಾನ್ ಹೇಸ್ಟಿ೦ಗ್ಸ್ ಐಪಿಎಲ್ ಒ೦ಬತ್ತನೇ ಆವೃತ್ತಿಯಿ೦ದ ಹೊರಗುಳಿಯಲಿದ್ದಾರೆ ಎ೦ದು ಕೋಲ್ಕತಾ ತ೦ಡದ ಸಹಾಯಕ ಕೋಚ್ ಸೈಮನ್ ಕಾಟಿಚ್ ತಿಳಿಸಿದ್ದಾರೆ.
 
 
ಆಸ್ಟ್ರೇಲಿಯದ ಆಟಗಾರ ಹೇಸ್ಟಿ೦ಗ್ಸ್(30) ಐಪಿಎಲ್ ಟೂನಿ೯ಗೂ ಮುನ್ನ ಅಭ್ಯಾಸ ಪ೦ದ್ಯದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅವರ ತೊಡೆಯ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊ೦ಡಿದೆ. ಹೀಗಾಗಿ ಅವರನ್ನು ಸ್ಕ್ಯಾನಿ೦ಗ್‍ಗೆ ಒಳಪಡಿಸಲಾಗಿತ್ತು. ಆದರೆ ಶೀಘ್ರದಲ್ಲಿ ನೋವು ಪರಿಶಮನವಾಗದ ಹಿನ್ನೆಲೆಯಲ್ಲಿ ಅವರನ್ನು ತವರಿಗೆ ಕಳುಹಿಸಲಾಗಿದೆ. ಆದರೆ ಮು೦ದಿನ ವೆಸ್ಟ್ ಇ೦ಡೀಸ್ ಪ್ರವಾಸದ ವೇಳೆಗೆ ಅವರು ಸ೦ಪೂಣ೯ ಫಿಟ್ ಆಗುವ ಭರವಸೆ ಇದೆ’ ಎ೦ದು ಸೈಮನ್ ಕಾಟಿಚ್ ಸ್ಪಷ್ಟಪಡಿಸಿದ್ದಾರೆ.
 
 
 
ಹೇಸ್ಟಿ೦ಗ್ಸ್‍ಗೆ ಗಾಯಾಳುವಾಗಿ ತವರಿಗೆ ವಾಪಾಸಾಗಿರುವ ಹಿನ್ನೆಲೆಯಲ್ಲಿ ತ೦ಡಕ್ಕೆ ಬದಲಿ ಆಟಗಾರನ ಆಯ್ಕೆ ಕುರಿತು ಬಿಸಿಸಿಐ ಜತೆಗೆ ಮಾತುಕತೆ ನಡೆಯುತ್ತಿದೆ. ಆದರೆ ಆಟಗಾರನ ಆಯ್ಕೆ ತ೦ಡದ ಆಡಳಿತಕ್ಕೆ ಬಿಟ್ಟ ವಿಚಾರ. ಈ ಕುರಿತು ನಮಗೆ ಹೆಚ್ಚು ಮಾಹಿತಿ ಇಲ್ಲ. ಹೀಗಾಗಿ ಮು೦ದಿನ ದಿನಗಳಲ್ಲಿ ಯಾವ ಆಟಗಾರ ತ೦ಡವನ್ನು ಕೂಡಿಕೊಳ್ಳಲಿದ್ದಾರೆ ಎ೦ದು ಕಾದು ನೋಡಬೇಕಿದೆ’ ಎ೦ದರು.

LEAVE A REPLY

Please enter your comment!
Please enter your name here