ಐದು ವಿಧೇಯಕಗಳ ಮಂಡನೆ, ಅಂಗೀಕಾರ

0
378

ವರದಿ: ಲೇಖಾ
ರಾಜ್ಯ ವಿಧಾನಸಭೆಯಲ್ಲಿ ಶಾಸನ ರಚನೆ ಕಾರ್ಯದ ಅಂಗವಾಗಿ ಐದು ವಿಧೇಯಕಗಳು ಮಂಡಿಸಲ್ಪಟ್ಟಿದ್ದು, ಐದು ವಿಧೇಯಕಗಳಿಗೂ ಧ್ವನಿ ಮತದಿಂದ ಅಂಗೀಕಾರ ದೊರೆಯಿತು.
 
 
ಅರಣ್ಯ ಸಚಿವ ರಮಾನಾಥ್ ರೈ ಅವರು ಕರ್ನಾಟಕ ಅರಣ್ಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಕಾನೂನು ಹಾಗೂ ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಅವರು ಗೃಹ ಸಚಿವರ ಪರವಾಗಿ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಮಂಡಿಸಿದರು. ಸಹಕಾರ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್ ಅವರು ಕರ್ನಾಟಕ ಸೌಹಾರ್ಧ ಸಹಕಾರಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.
 
 
ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ವಿಧೇಯಕವನ್ನು ಮಂಡಿಸಿದರು, ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು 2016 ರ ಕರ್ನಾಟಕ ಗೃಹ ನಿರ್ಮಾಣ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಎಲ್ಲಾ ಐದು ವಿಧೇಯಕಗಳು ಧ್ವನಿ ಮತದಿಂದ ಅನುಮೋದನೆಗೊಂಡವು.

LEAVE A REPLY

Please enter your comment!
Please enter your name here