ಐದನೇ ಹಂತದ ಮತದಾನ

0
556

ನಮ್ಮ ಪ್ರತಿನಿಧಿ ವರದಿ
ಉತ್ತರ ಪ್ರದೇಶ ವಿಧಾನ ಸಭೆಯ 5ನೇಹಂತದ ಮತದಾನ ನಡೆಯುತ್ತಿದೆ. 11 ಜಿಲ್ಲೆಗಳ 51 ಕ್ಷೇತ್ರಗಳಿಗೆ ಈ ಮತದಾನ ನಡೆಯುತ್ತಿದ್ದು ತೀವ್ರ ಕುತೂಹಲ ಸೃಷ್ಠಿಸುತ್ತಿದೆ.ಮತದಾನಕ್ಕಾಗಿ 18,822 ಮತ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರಲ್ಲಿ 2,351 ಮತಗಟ್ಟೆಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ.
ಕಣದಲ್ಲಿ 607 ಅಭ್ಯರ್ಥಿಗಳಿದ್ದಾರೆ. 1.81 ಕೋಟಿ ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ವಿಶೇಷ ಭದ್ರತೆ
ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
905 ಡಿಜಿಟಲ್‌ ಕ್ಯಾಮರಾ, 978 ವೀಡಿಯೋ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೇ 1792 ಕೇಂದ್ರಗಳಲ್ಲಿ ವೆಬ್‌ ವೋಟಿಂಗ್‌ ಜಾರಿಯಲ್ಲಿರಲಿದೆ.

LEAVE A REPLY

Please enter your comment!
Please enter your name here