ಐತಿಹಾಸಿಕ ಹೆಜ್ಜೆಯಲ್ಲಿ ನಾವೆಲ್ಲರೂ ಗೆದ್ದು ತೋರಿಸೋಣ

0
129

ರಾಷ್ಟ್ರೀಯ ಪ್ರತಿನಿಧಿ ವರದಿ
ದೇಶದಲ್ಲಿ ನೋಟ್ ಬ್ಯಾನ್ ಗೆ 1ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಳೆ ನೋಟು ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.
 
 
ಐತಿಹಾಸಿಕ ಹೆಜ್ಜೆಯಲ್ಲಿ ನಾವೆಲ್ಲರೂ ಗೆದ್ದು ತೋರಿಸೋಣ. ಕಪ್ಪುಹಣದ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಕರೆ ನೀಡಿದ್ದಾರೆ.
 
ನೋಟ್ ಬ್ಯಾನ್ ನಿಂದ ತೊಂದರೆಯಾಗಲಿದೆ ಎಂಬುದನ್ನು ಮೊದಲೇ ಹೇಳಿದ್ದೆ. ಈಗ ಆಗುತ್ತಿರುವ ತೊಂದರೆ ತಾತ್ಕಾಲಿಕ ಅಷ್ಟೇ. ನೀವು ಎಲ್ಲ ತೊಂದರೆ, ಕಷ್ಟಗಳ ನಡುವೆಯೂ ಸಹಕರಿಸಿದ್ದಕ್ಕೆ ದೇಶದ ಜನತೆಗೆ ಧನ್ಯವಾದ ಎಂದು ಪ್ರಧಾನಿ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
 
 
ಹಳೆ ನೋಟು ನಿಷೇಧದಿಂದ ರೈತರು, ವ್ಯಾಪಾರಿಗಳು, ಕಾರ್ಮಿಕರಿಗೆ ಲಾಭವಾಗಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದರ ಲಾಭ ಸಿಗಲಿದೆ. ಮುಂದಿನ ದಿನಗಳಲ್ಲಿ ಅತೀ ಬಡ, ಮಾಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ಇದರಿಂದ ಹಳ್ಳಿಗಳ ಸ್ವರೂಪವೂ ಬದಲಾಗಲಿದೆ. ಇದು ಭಯೋತ್ಪಾದಕ, ಭ್ರಷ್ಟಾಚಾರ ತಡೆಗೆ ನಡೆಸುತ್ತಿರುವ ಯಜ್ಞವಾಗಿದೆ ಎಂದು ಪ್ರಧಾನಿ ಟ್ವಿಟ್ ಮಾಡಿದ್ಧಾರೆ.

LEAVE A REPLY

Please enter your comment!
Please enter your name here