ಐತಿಹಾಸಿಕ ಸಾಹಸಕ್ಕೆ ಕ್ಷಣಗಣನೆ

0
338

ರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗಿದೆ. ಗೂಗಲ್ ನಿರ್ಮಿತ ಉಪಗ್ರಹ ಸೇರಿ ಏಕಕಾಲಕ್ಕೆ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
 
 
ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ವಿಶ್ವದ 2ನೇ ರಾಷ್ಟ್ರ ಎಂಬ ಹೆಗ್ಗಳಿಕಿಗೆ ಪಾತ್ರವಾಗಲಿದೆ. ಆ ಮೂಲಕ ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನಕ್ಕೇರಲಿದೆ. 2008ರಲ್ಲಿ ಒಂದೇ ರಾಕೆಟ್ ಮೂಲಕ 10 ಉಪಗ್ರಹಗಳ ಉಡಾವಣೆ ಮಾಡಿದ್ದ ಇಸ್ರೋ, ಜೂನ್ 22ರಂದು ಅಂದರೆ ಇಂದು ಆಂಧ್ರಪ್ರದೇಶ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 20 ಉಪಗ್ರಹಗಳ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.

LEAVE A REPLY

Please enter your comment!
Please enter your name here