ಐತಿಹಾಸಿಕ ಮಹತ್ವವನ್ನು ಆರ್.ಬಿ.ಐ. ಸಾರಿ ಹೇಳಿದ್ದು ಹೇಗೆ ಗೊತ್ತಾ…?

0
2287

ನಮ್ಮ ಪ್ರತಿನಿಧಿ ವರದಿ(ನವದೆಹಲಿ)
ಆರ್.ಬಿ.ಐ 20ರೂ ಮುಖಬೆಲೆಯ ಹೊಸ ನೋಟನ್ನು ಹೊಸ ವಿನ್ಯಾಸದೊಂದಿಗೆ ಹೊರತರುತ್ತಿದೆ. ಹೊಸ ವಿನ್ಯಾಸ, ಹೊಸವರ್ಣದೊಂದಿಗೆ ಹೊರಬರುವ ಈ ನೋಟು ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್ ಸಹಿ ಹೊಂದಿದೆ. ಹಸಿರು ಹಳದಿವರ್ಣದ ಸುಂದರ ನೋಟು ಇದಾಗಿದ್ದು ಎಲ್ಲೋರ ಗುಹೆಗಳ ಚಿತ್ರವನ್ನು ನೋಟಿನಲ್ಲಳವಡಿಸಲಾಗಿದೆ. ದೇಶದ ಐತಿಹಾಸಿಕ ಮಹತ್ವವನ್ನು ಸಾರುವ ಈ ನೋಟು ಇತರೆಲ್ಲಾ ನೋಟುಗಳಿಗಿಂತ ವಿಭಿನ್ನವಾಗಿ ಮೂಡಿಬರಲಿದೆ.

 

129ಮಿ.ಮೀ. ಉದ್ದ 63ಮಿ.ಮೀ ಅಗಲವಾದ ನೋಟು ಇದಾಗಿದ್ದು ಮುಂಭಾಗದಲ್ಲಿ 20ಎಂದು ದೇವನಾಗರೀ ಲಿಪಿಯಲ್ಲಿ ಬರೆಯಲಾಗಿದೆ. ಮಹಾತ್ಮಾಗಾಂಧೀಜಿಯವರ ಚಿತ್ರವನ್ನು ನೋಟಿನಲ್ಲಳವಡಿಸಲಾಗಿದೆ. ಅತೀ ಸೂಕ್ಷ್ಮ ಅಕ್ಷರಗಳಲ್ಲಿ ಆರ್.ಬಿ.ಐ, ಭಾರತ್ ಹಾಗೂ ಇಂಡಿಯಾ, 20 ಎಂದು ಬರೆಯಲಾಗಿದೆ. ಅಶೋಕ ಸ್ತಂಭವೂ ಈ ನೋಟಿನಲ್ಲಿದೆ. ಇಷ್ಟೇ ಅಲ್ಲದೆ ನೋಟಿನ ಹಿಂಭಾಗದ ಎಡಬದಿಯಲ್ಲಿ ಮುದ್ರಣದ ವರ್ಷ, ಸ್ವಚ್ಛ ಭಾರತ ಲಾಂಛನ, ಅದರ ಘೋಷವಾಕ್ಯಗಳಿವೆ. ವಿವಿಧ ಭಾಷೆಗಳಲ್ಲಿ ಇಪ್ಪತ್ತು ರುಪಾಯಿ ಎಂದು ನಮೂದಿಸಲಾಗಿದೆ. ಅಂತೂ ಅತ್ಯಂತ ವಿಶೇಷವಾಗಿ ಈ ನೋಟು ಜನಸಾಮಾನ್ಯರ ಜೇಬು ತಲುಪುವ ವ್ಯವಸ್ಥೆ ಆರ್.ಬಿ.ಐ. ಮಾಡಿದೆ.

LEAVE A REPLY

Please enter your comment!
Please enter your name here