ಐತಿಹಾಸಿಕ ನಿರ್ಣಯ!

0
337

 
ರಾಷ್ಟ್ರೀಯ ಪ್ರತಿನಿಧಿ ವರದಿ
ಮಹಾರಾಷ್ಟ್ರದ ಶನಿಸಿಂಗ್ಣಾಪುರದ ದೇಗುಲದ ಪ್ರವೇಶ ವಿವಾದ ಕೊನೆ ಹಂತಕ್ಕೆ ಬಂದಿದೆ. ದೇಗುಲದ ನಾಲ್ಕು ಶತಮಾನದ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ.
ಕೊನೆಗೂ ಶನಿಸಿಂಗ್ಣಾಪುರದಲ್ಲಿ ಮಹಿಳೆಯರಿಗೂ ಪೂಜೆಗೆ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದ ಅಹಮದ್ ನಗರ್ ಜಿಲ್ಲೆಯ ಶನಿಸಿಂಗ್ಣಾಪುರ ದೇವಾಲಯದ ಟ್ರಸ್ಟ್ ದೇಗುಲದ ಮುಖ್ಯ ಶಿಲೆಯ ಪೂಜೆ ಮಾಡಲು ಮಹಿಳೆಯರಿಗೆ ಅನುಮತಿ ನೀಡಿದೆ.
 
 
ದೇವಸ್ಥಾನದ ಟ್ರಸ್ಟ್ ದೇಗುಲದಲ್ಲಿ ಪೂಜೆ ಮಾಡಲು ಭೂಮಾತಾ ಬ್ರಿಗೇಡ್ ಸಂಘಟನೆ ಅಧ್ಯಕ್ಷೆ ತೃಪ್ತಿ ದೇಸಾಯಿಗೆ ಆಹ್ವಾನಿಸಲಾಗಿದೆ. ಈ ಮೂಲಕ ದೇಗುಲದ 400 ವರ್ಷಗಳ ಹಳೇಪರಂಪರೆ ಮುರಿದುಬಿದ್ದಿದೆ.
 
 
ಟ್ರಸ್ಟ್ ನಿಂದ ಅಧಿಕೃತ ಮಾಹಿತಿ
ಟ್ರಸ್ಟ್ ನಿಂದ ಐತಿಹಾಸಿಕ ನಿರ್ಧಾರವಾಗಿದೆ. ಹೈಕೋರ್ಟ್ ಆದೇಶದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಎಲ್ಲರಿಗೂ ಸಹ ದೇಗುಲದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ದೇಗುಲದ ಟ್ರಸ್ಟ್ ಸದಸ್ಯರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
 
 
ನಿಯಮ ಮುರಿದ ಪುರುಷ ಭಕ್ತರು
ಕೋರ್ಟ್ ನಿಯಮ ಮುರಿದು ಪುರುಷ ಭಕ್ತರು ಪೂಜೆ ಸಲ್ಲಿಸಿದ್ದರು. ಶನಿದೇವರ ವಿಗ್ರಹ ಇರುವ ಸ್ಥಳಕ್ಕೆ ನೂರಾರು ಪುರುಷ ಭಕ್ತರು ನುಗ್ಗಿದ್ದರು.
 
 
 
ಮಹಿಳಾಪರ ಹೋರಾಟಗಾರ್ತಿಗೆ ತೃಪ್ತಿ
ಇದು ಮಹಿಳೆಯರಿಗೆ ಸಿಕ್ಕ ದೊಡ್ಡ ಜಯ. ನಮ್ಮ ಮೂಲಭೂತವಾದ ಹಕ್ಕು ಇಂದು ನಮಗೆ ಸಿಕ್ಕಿದೆ ಎಂದು ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಹೇಳಿದ್ದಾರೆ.
ಮಹಿಳೆಯರಿಗೆ ಸಿಗಬೇಕಾದ ಸಮಾನತೆಯ ಹಕ್ಕು ಸಿಕ್ಕಿದೆ. ಮಹಾರಾಷ್ಟ್ರ ಸರ್ಕಾರ, ದೇವಾಲಯದ ಟ್ರಸ್ಟ್ ಗೆ ಧನ್ಯವಾದ. ಹೈಕೋರ್ಟ್ ಗೆ ನಾವು ವಿಶೇಷ ಧನ್ಯವಾದ ಸಲ್ಲಿಸುತ್ತಿದ್ದೇವೆ. ಎಲ್ಲಾ ಧಾರ್ಮಿಕ ನೆಲೆಗಳಿಗೂ ಇದೇ ರೀತಿ ಪ್ರವೇಶವಿರಬೇಕು. ಎಲ್ಲೂ ಕೂಡ ಮಹಿಳೆಯರ ಹಕ್ಕು ಕಸಿಯುವಂತಾಗಬಾರದು ತೃಪ್ತಿ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here