ಐತಿಹಾಸಿಕ ನಗರಿಯಲ್ಲಿ ಮತ್ತೊಂದು ಅಬ್ಬಕ್ಕ ಮೂರ್ತಿ’

0
130

ವಾರ್ತೆ ವಿಶೇಷ: ಹರೀಶ್ ಕೆ.ಆದೂರು

ಮೂಡುಬಿದಿರೆ: ಐತಿಹಾಸಿಕ ಪ್ರಸಿದ್ಧಿಯ ಮೂಡುಬಿದಿರೆಯಲ್ಲಿಮಣ್ಣಿನ ಮಗಳು ರಾಣಿ ಅಬ್ಬಕ್ಕಳ’ ಸುಂದರ ಮೂರ್ತಿ ಸಹಿತ ಕಿರು ಉದ್ಯಾನವನ ನಿರ್ಮಾಣವಾಗುತ್ತಿದೆ. ಮೂಡುಬಿದಿರೆಯ ಚೌಟರ ಅರಮನೆಯ ಮುಂಭಾಗದಲ್ಲಿರುವ ಕೂಡು ರಸ್ತೆಯ ಮಧ್ಯಭಾಗದಲ್ಲಿ ಕಿರು ಉದ್ಯಾನವನದೊಂದಿಗೆ ಅಬ್ಬಕ್ಕ ದೇವಿಯ ನಿಂತ ಭಂಗಿಯ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಇದೆಲ್ಲವೂ ಮೂಡುಬಿದಿರೆಯ ಪ್ರತಿಷ್ಟಿತ ಜವನೆರ್ ಬೆದ್ರ ಸಂಘಟನೆಯ ಕಾರ್ಯ ಎಂಬುದನ್ನು ಗಮನಿಸಬೇಕಾಗಿದೆ; ಶ್ಲಾಘಿಸಬೇಕಾಗಿದೆ.


ಇದು ಎರಡನೆಯ ಮೂರ್ತಿ! :

Advertisement

ಮೂಡುಬಿದಿರೆಯಲ್ಲಿ ಮಣ್ಣಿನ ಮಗಳ ಸ್ಮರಣೆ ಮಾಡಬೇಕು…ಪ್ರತಿಮೆಯೊಂದನ್ನು ಸ್ಥಾಪಿಸಬೇಕೆಂಬ ಹಿನ್ನಲೆಯಲ್ಲಿ ಹಲವು ಸಮಯಗಳಿಂದ ಶ್ರಮ ವಹಿಸುತ್ತಾ ಬಂದಿತ್ತು. ಮೂಡುಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಮೂಡುಬಿದಿರೆ ವೀರ ರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮದಲ್ಲಿ ಮೂಡುಬಿದಿರೆ ಕಂಬಳೋತ್ಸವ ಸಂದರ್ಭ ಬೃಹತ್ ಮೂರ್ತಿ ಅನಾವರಣಗೊಳಿಸಲಾಗಿತ್ತು. ಇದೀಗ ಮೂಡುಬಿದಿರೆಯ ಐತಿಹಾಸಿಕ ಚೌಟರ ಅರಮನೆಯ ಮುಂಭಾಗದಲ್ಲಿ ಮತ್ತೊಂದು ಮೂರ್ತಿ ನಿರ್ಮಾಣಗೊಂಡಿದೆ. ಯುದ್ಧಕ್ಕೆ ಜೀಟಿಗೆ ಹಿಡಿದು ಅಣಿಯಾದ ರೀತಿಯ ಮೂರ್ತಿ ಇದೀಗ ಎಲ್ಲರ ಅಕರ್ಷಣೆಗೆ ಪಾತ್ರವಾಗತೊಡಗಿದೆ.


ಅರಮನೆಗೊಂದು ಮೆರುಗು:

ಮೂಡುಬಿದಿರೆಯ ಚೌಟರ ಅರಮನೆ ಇತಿಹಾಸ ಪ್ರಸಿದ್ಧಿ ಪಡೆದಂತಹುದು. ಇದೇ ಅರಮನೆಯ ವಂಶಸ್ಥೆ ಬರಿಗಾಲ ರಾಣಿ ಅಬ್ಬಕ್ಕ. ವಸಾಹತು ಶಾಹಿಗಳ ವಿರುದ್ಧ ಹೋರಾಟಮಾಡಿದ ವೀರ ವನಿತೆ ಮೂಡುಬಿದಿರೆಯ ಮಣ್ಣಿನ ಮಗಳು ರಾಣಿ ಅಬ್ಬಕ್ಕ. 15ನೇ ಶತಮಾನದ ಸುಮಾರಿಗೆ ಪೋರ್ಚುಗೀಸರ ವಿರುದ್ಧ ಜೀಟಿಗೆಯನ್ನೇ ಆಯುಧವನ್ನಾಗಿ'ಮಾಡಿ ಹೋರಾಡಿದ ರಾಣಿ ಅಬ್ಬಕ್ಕಳಿಗೆ ಹುಟ್ಟಿದ ನೆಲದಲ್ಲಿ ನ್ಯಾಯ ಒದಗಿಸಿ, ಆಕೆಯ ಸಾಧನೆಗಳು ಮುಂದಿನ ತಲೆಮಾರಿಗೂ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಮೂಡುಬಿದಿರೆ ಜವನೆರ್ ಬೆದ್ರ ಸಂಘಟನೆ ಪುತ್ಥಳಿ ನಿರ್ಮಾಣ ಮಾಡಿದೆ. ಅರಮನೆಯ ಮುಂದೆ ರಾಣಿ ಅಬ್ಬಕ್ಕಳ ಮೂರ್ತಿ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಅರಮನೆಗೊಂದು ಹೊಸ ಮೆರುಗು ಬಂದಂತಾಗಿದೆ. ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಅರಮನೆಯ ಮುಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರು ಉದ್ಯಾನವನ ಸಹಿತ ರಾಣಿ ಅಬ್ಬಕ್ಕಳ ಪುತ್ಥಳಿ ಅರಮನೆಗೆ ಹೊಸ ಮೆರುಗು ತಂದು ಕೊಟ್ಟಂತಾಗಿದೆ.

ಹತ್ತು ಹಲವು ಕಾರ್ಯ:

ಕಿರು ಉದ್ಯಾನವನದ ಆವರಣದಲ್ಲಿಅಬ್ಬಕ್ಕ ಉತ್ಸವ’ದಂತಹ ಹಲವು ಕಾರ್ಯಗಳನ್ನು ಮಾಡುವ ಯೋಜನೆಯನ್ನು ಜವನೆರ್ ಬೆದ್ರ ಸಂಘಟನೆ ಹಮ್ಮಿಕೊಂಡಿದೆ. ವರ್ಷಕ್ಕೊಮ್ಮೆ ಅಬ್ಬಕ್ಕ ಸಂಸ್ಮರಣಾ ಕಾರ್ಯವನ್ನು ನಡೆಸುವ ಯೋಜನೆ ಸಂಘಟನೆಯದ್ದು. ಒಟ್ಟಿನಲ್ಲಿ ಮೂಡಬಿದಿರೆಯಲ್ಲಿ ರಾಣಿ ಅಬ್ಬಕ್ಕ ಸ್ಮರಣೆ ಆಗುತ್ತಿರುವುದು ಶ್ಲಾಘನಾರ್ಹ ಕಾರ್ಯ.

ಮೂಡುಬಿದಿರೆಯ ಮಣ್ಣಿನ ಮಗಳ ಪುತ್ಥಳಿಯ ನಿರ್ಮಾಣ ಎಂದೋ ಆಗಬೇಕಾಗಿತ್ತು. ಆದರೆ ಇಂದು ಅರಮನೆಯ ಮುಂಭಾಗದಲ್ಲಿಯೇ ನಿರ್ಮಾಣಮಾಡುವ ಅವಕಾಶ `ಜವನೆರ್ ಬೆದ್ರ’ಸಂಘಟನೆಗೆ ಒಲಿದು ಬಂದದ್ದು ನಮ್ಮ ಸೌಭಾಗ್ಯ. ಇಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚಿಂತನೆ ಮಾಡಲಾಗಿದೆ.

  • ಅಮರ್ ಕೋಟೆ, ಸಂಸ್ಥಾಪಕರು ಜವನೆರ್ ಬೆದ್ರ ಸಂಘಟನೆ.

LEAVE A REPLY

Please enter your comment!
Please enter your name here