ಏಳನೇ ಸ್ಥಾನದಲ್ಲಿ ಉಜಿರೆ ಕಾಲೇಜು

0
462

ಉಜಿರೆ ಪ್ರತಿನಿಧಿ ವರದಿ
ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸತತ ಮೂರು ಬಾರಿ ‘ಎ’ ಗ್ರೇಡ್ ಮಾನ್ಯತೆಗೆ ಪಾತ್ರವಾಗಿರುವ ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಕೀತರ್ಿಗೆ ಮತ್ತೊಂದು ಗರಿ ಸೇರಿದೆ. ‘ಕರಿಯರ್ಸ್ 360’ ನಿಯತಕಾಲಿಕೆಯು ನಡೆಸಿದ ಅತ್ಯುತ್ತಮ ಕಾಲೇಜು ಸಮೀಕ್ಷೆಯಲ್ಲಿ ಉಜಿರೆ ಕಾಲೇಜಿಗೆ ರಾಜ್ಯದಲ್ಲೇ ಏಳನೇ ಸ್ಥಾನದ ಹಿರಿಮೆ ಪ್ರಾಪ್ತವಾಗಿದೆ.
 
 
ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಕೋರ್ಸುಗಳಿಗೆ ಸಂಬಂಧಿಸಿದಂತೆ ದೇಶದಲ್ಲೇ ಅತ್ಯುತ್ತಮ ಕಾಲೇಜುಗಳನ್ನು ಆಯ್ಕೆ ಮಾಡುವ ವಿಶೇಷ ಅಭಿಯಾನವನ್ನು ಈ ಪತಿಕೆ ಇತ್ತೀಚೆಗೆ ನಡೆಸಿತ್ತು.
 
 
ಯುಜಿಸಿ ನಿರ್ದೇಶಿತ ನ್ಯಾಕ್ ಸಂಸ್ಥೆಯ ಮೌಲ್ಯ ಮಾಪನದ ಗ್ರೇಡ್, ಕಾಲೇಜಿನಲ್ಲಿ ಅಧ್ಯಯನಕ್ಕೆ ಲಭ್ಯವಿರುವ ವೈವಿಧ್ಯಮಯ ಕೋರ್ಸುಗಳು, ಸಂಶೋಧನಾ ಚಟುವಟಿಕೆಗಳು, ಶೈಕ್ಷಣಿಕ ಸಾಧನೆ, ಆಟೋಟ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾನದಂಡವನ್ನಾಗಿಸಿ ಸಮೀಕ್ಷೆ ನಡೆಸಿರುವುದಾಗಿ ಪತ್ರಿಕೆಯ ಸಂಪಾದಕರು ಸಂಚಿಕೆಯಲ್ಲಿ ಉಲ್ಲೇಖಿಸಿದ್ದಾರೆ.
 
ದೇಶದ ಎಲ್ಲಾ ರಾಜ್ಯಗಳಲ್ಲೂ ಸಮೀಕ್ಷೆ ನಡೆಸಿ ರಾಜ್ಯವಾರು ಅತ್ಯುತ್ತಮ ಕಾಲೇಜುಗಳನ್ನು ಆಯ್ಕೆ ಮಾಡಿರುವ ಪತ್ರಿಕೆಯು ಕರ್ನಾಟಕ ರಾಜ್ಯದಲ್ಲಿ ಈ ಉದ್ದೇಶಕ್ಕಾಗಿ 80 ಕಾಲೇಜುಗಳನ್ನು ಅಂತಿಮ ಸುತ್ತಿನಲ್ಲಿ ಆಯ್ಕೆ ಮಾಡಿ ಗ್ರೇಡ್ ಪಟ್ಟಿಯನ್ನು ಪ್ರಕಟಿಸಿದೆ.
 
 
ಶಿಕ್ಷಣ, ಅಧ್ಯಯನ, ಉದ್ಯೋಗಾವಕಾಶಕ್ಕೆ ಪೂರಕವಾಗಿ ಬಿ. ಮಹೇಶ್ ಶರ್ಮ ಅವರ ಸಂಪಾದಕತ್ವದಲ್ಲಿ ಈ ನಿಯತಕಾಲಿಕೆಯು ದೆಹಲಿಯಿಂದ ಕಳೆದ 8 ವರ್ಷಗಳಿಂದ ಪ್ರಸಾರಗೊಳ್ಳುತ್ತಿದ್ದು, ವಿಶೇಷ ಜನಮನ್ನಣೆ ಗಳಿಸುತ್ತಿದೆ ಎಂಬ ಹೆಗ್ಗಳಿಕೆ ಇದೆ.
 
ದೇಶದ ಅತ್ಯುತ್ತಮ ಕಾಲೇಜುಗಳು ಎಂಬ ಮುಖಪುಟದ ವಿಶೇಷ ಪ್ರಕಟದಲ್ಲಿ ಪತಿಕೆಯು ಜುಲೈ ತಿಂಗಳ ಪತಿಕೆಯಲ್ಲಿ ಅತ್ಯುತ್ತಮ ಕಾಲೇಜುಗಳ ವಿಸ್ತೃತ ಮಾಹಿತಿ ಪ್ರಕಟವಾಗಿದ್ದು, ಉನ್ನತ ಅಧ್ಯಯನ ಆಕಾಂಕ್ಷಿಗಳಿಗೆ ವಿಶೇಷ ಮಾಹಿತಿ ಇದೆ.
 
ಪತ್ರಿಕೆ ನೀಡಿರುವ ಗ್ರೇಡ್ ಪ್ರಕಾರ ಉಜಿರೆ ಕಾಲೇಜು ರಾಜ್ಯದಲ್ಲೇ ಏಳನೇ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡದಲ್ಲಿ ಈ ಹೆಗ್ಗಳಿಕೆಗೆ ಪಾತ್ರವಾದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಪ್ರಾಂಶುಪಾಲರಾದ ಡಾ. ಮೋಹನ ನಾರಾಯಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here