ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

0
251

ವರದಿ:ಲೇಖಾ
ಇಸ್ರೇಲ್ ತಂತ್ರಜ್ಞಾನ ಸಹಯೋಗದೊಂದಿಗೆ ಭಾರತ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆದಿದೆ.
 
 
 
ಹೈದ್ರಾಬಾದ್ ಮೂಲದ ಡಿಆರ್​ಡಿಒ ಅಭಿವೃದ್ಧಿ ಪಡಿಸಿದ ಈ ಅತ್ಯಾಧುನಿಕ ಏರ್ ಮಿಸೈಲ್ ಬೆಳಗ್ಗೆ 8.15ಕ್ಕೆ ಚಂಡೀಪುರದಲ್ಲಿರುವ ರಕ್ಷಣಾ ಇಲಾಖೆ ನೆಲೆಯಲ್ಲಿ ಪ್ರಯೋಗಕ್ಕೆ ಒಳಗಾಯಿತು.
 
 
 
ಇದು 50 ರಿಂದ 70 ಕಿ.ಮೀ. ಪ್ರದೇಶದ ವರೆಗೆ ದಾಳಿ ಸಾಮರ್ಥ್ಯ ಹೊಂದಿದೆ. ತನ್ನ ನಿಗದಿತ ಕಾರ್ಯದೊಂದಿಗೆ ವಿಚಕ್ಷಣೆ ಮತ್ತು ಬೆದರಿಕೆ ತುರ್ತು ಸಂದೇಶ ನೀಡಿ ಮಿಸೈಲ್ ಸಾಗುವ ಮಾರ್ಗದ ನಿರ್ದೇಶನವನ್ನೂ ನೀಡಲಿದೆ ಎಂದು ಡಿ.ಆರ್.ಡಿ.ಒ. ವಿಜ್ಞಾನಿಗಳು ತಿಳಿಸಿದ್ದಾರೆ.
 
 
 
ನೂತನ ಮಿಸೈಲ್ ಪರೀಕ್ಷಾರ್ಥ ಪ್ರಯೋಗದ ಹಿನ್ನಲೆಯಲ್ಲಿ ರಕ್ಷಣಾ ನೆಲೆಯ ಸಮೀಪವಿದ್ದ 3653 ಮಂದಿ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.

LEAVE A REPLY

Please enter your comment!
Please enter your name here