ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ: ಇಬ್ಬರು ಅರೆಸ್ಟ್

0
271

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರು ಏರ್ ಪೋರ್ಟ್ ಗೆ ಹುಸಿ ಬಾಂಬ್ ಕರೆ ಪ್ರಕರಣದ ಸಂಬಂಧ ಕೇರಳ ಮೂಲದ ಜೋಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಅರ್ಜುನ್, ನೇಹಾ ಗೋಪಿನಾಥನ್ ನನ್ನು ವಶಕ್ಕೆ ಪಡೆಯಲಾಗಿದೆ.
 
 
ಇಂದು ಅರ್ಜುನ್, ನೇಹ ಎಂಗೇಜ್ ಮೆಂಟ್ ನಡೆಯಬೇಕಿತ್ತು. ಕೇರಳದ ಅಲೆಪ್ಪಿ ನಿವಾಸಿ ಅರ್ಜಿನ್, ನೇಹ ಗೋಪಿನಾಥನ್ ಸೇರಿ ಅಲೆಪ್ಪಿ ಪಬ್ಲಿಕ್ ಬೂತ್ ನಿಂದಲೇ ಏರ್ ಪೋರ್ಟ್ ಗೆ ಹುಸಿ ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
 
 
 
ಅಲೆಪ್ಪಿಯಿಂದ ಕರೆ ಬಂದಿರುವ ಬಗ್ಗೆ ಜೋಡಿಗೆ ಮಾಹಿತಿ ಇಲ್ಲ. ನಿನ್ನೆ ರಾತ್ರಿ 8.45ರ ಸುಮಾರಿಗೆ ಮ್ಯಾನೇಜರ್ ಗೆ ಹುಸಿ ಕರೆ ಬಂದಿತ್ತು. ಕೊಚ್ಚಿಗೆ ತೆರಳುವ ವಿಮಾನದಲ್ಲಿ ಬಾಂಬ್ ಇದೆ ಎಂದು ಕರೆ ಬಂದಿತ್ತು.
 
 
 
ಆದ್ರೆ ರಾತ್ರಿಯಿಡೀ ಶೋಧ ನಡೆಸಿದರೂ ಯಾವುದೇ ವಸ್ತು ಸಿಕ್ಕಿಲ್ಲ. ಹುಸಿ ಕರೆ ಎಂದು ತಿಳಿದ ಬಳಿಕ ವಿಮಾನ ಟೇಕ್ ಆಫ್ ಆಗಿದೆ. ಇಂದು ಬೆಳಗ್ಗೆ 3.10ಕ್ಕೆ ಬೆಂಗಳೂರಿನಿಂದ ಕೊಚ್ಚಿಗೆ ವಿಮಾನ ಹೊರಟಿದೆ.
ದೇಶೀಯ ವಿಮಾನದಲ್ಲಿ 160 ಜನರು ಪ್ರಯಾಣಿಸುತ್ತಿದ್ದರು.

LEAVE A REPLY

Please enter your comment!
Please enter your name here