ಏರ್ ಪೋರ್ಟ್ ಗೆ ನುಗ್ಗಲು ಯತ್ನ

0
398

ರಾಷ್ಟ್ರೀಯ ಪ್ರತಿನಿಧಿ ವರದಿ
ಬೆಳಗಾವಿ ವಿಮಾನ ನಿಲ್ದಾಣಕ್ಕೆ ನುಗ್ಗಲು ಗುಂಪೊಂದು ಯತ್ನಿಸಿದೆ. ಗೋಡೆ ಹಾರಿ ಏರ್ ಪೋರ್ಟ್ ಗೆ ನುಗ್ಗಲು ಗುಂಪು ಯತ್ನಿಸಿದೆ. ಏರ್ ಪೋರ್ಟ್ ನ ಆಗ್ನೇಯ ದಿಕ್ಕಿನಲ್ಲಿ ಅಪರಿಚಿತ ಜನರು ಗೋಡೆ ಹಾರಿ ಬಂದಿದ್ದಾರೆ.ಗುಂಪಿನಲ್ಲಿ ಒಟ್ಟು 12 ಜನರಿದ್ದರು.
 
 
 
12 ಅಡಿಯ ಗೋಡೆ ಹಾರಿ ಬಂದಿದ್ದ ಅಪರಿಚಿತರ ಗುಂಪಿನಲ್ಲಿದ್ದ 4 ಜನರನ್ನು ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಉಳಿದ 8 ಜನರು ಏರ್ ಪೋರ್ಟ್ ನ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.
 
 
ಬಂಧಿತ ನಾಲ್ವರಲ್ಲಿ ಮೂವರು ಬೆಳಗಾವಿಯ ನಿವಾಸಿಗಳಾಗಿದ್ದಾರೆ. ಓರ್ವ ಹೈದರಾಬಾದ್ ಮೂಲಕ ವ್ಯಕ್ತಿಯಾಗಿದ್ದಾನೆ.

LEAVE A REPLY

Please enter your comment!
Please enter your name here