ಏರ್ ಏಷ್ಯಾ ಶಾಕ್

0
265

 
ನಮ್ಮ ಪ್ರತಿನಿಧಿ ವರದಿ
ಬೆಂಗಳೂರಿನಿಂದ ಏರ್ ಏಷ್ಯಾ ಫ್ಲೈಟ್ ನಲ್ಲಿ ಚಿತ್ರ ನೋಡಲು ಹೋದ ರಜನಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಟಾಕೀಸ್ ನಲ್ಲಿ ಚಿತ್ರ ತೋರಿಸುವ ಬದಲು ಬೇರೆಡೆ ಆಯೋಜನೆ ಮಾಡಿತ್ತು.
 
 
ಬೆಂಗಳೂರಿನಿಂದ ಚೆನ್ನೈಗೆ 180 ಅಭಿಮಾನಿಗಳ ತಂಡ ಚೆನ್ನೈಗೆ ತೆರಳಿತ್ತು. ಅಭಿಮಾನಿಗಳನ್ನು ವಿಮಾನದಲ್ಲಿ ಕರೆದೊಯ್ದು ಕಬಾಲಿ ಚಿತ್ರ ತೋರಿಸಲು ನಿರ್ಧರಿಸಲಾಗಿತ್ತು. ಏರ್ ಏಷ್ಯಾ ಕಬಾಲಿ ಚಿತ್ರಕ್ಕಾಗಿ ವಿಶೇಷ ಪ್ಯಾಕೇಜ್ ನೀಡಿತ್ತು.
 
 
ಫ್ಲೈಟ್ ಪ್ರಯಾಣಕ್ಕೆ ರಜನಿ ಅಭಿಮಾನಿಗಳು ತಲಾ 7, 860 ಸಾವಿರ ರೂ. ನೀಡಿತ್ತು. ಕಬಾಲಿಗಾಗಿ ಫ್ಲೈಟ್ ನ್ನು ಡಿಸೈನ್ ಮಾಡಿತ್ತು. ಅಲ್ಲದೆ ಏರ್ ಏಷ್ಯಾ ಸಂಸ್ಥೆ ಕಬಾಲಿ ಚಿತ್ರವನ್ನು ಸತ್ತಂ ಥಿಯೇಟರ್ ನಲ್ಲಿ ತೋರಿಸುತ್ತೇವೆ ಎಂದಿತ್ತು. ಆದರೆ ಬಳಿ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರ ವೀಕ್ಷಣೆಗೆ ಸಿದ್ಧತೆ ಮಾಡಿಕೊಂಡಿದೆ.
 
 
 
ಇದಕ್ಕೆ ರಜನಿ ಅಭಿಮಾನಿಗಳು ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರ ವೀಕ್ಷಣೆಗೆ ನಿರಾಕರಿಸಿದ್ದಾರೆ. ಸತ್ಯಂ ಥಿಯೇಟರ್ ನಲ್ಲಿ ಚಿತ್ರ ತೋರಿಸಿ ಇಲ್ಲವೇ ಹಣ ನೀಡಿ ಎಂದು ರಜನಿ ಅಭಿಮಾನಗಳು ಪಟ್ಟು ಹಿಡಿದಿದ್ದಾರೆ.

LEAVE A REPLY

Please enter your comment!
Please enter your name here