ಏಪ್ರಿಲ್ ನಿಂದ ಉದ್ಯೋಗ ಖಾತ್ರಿ ಕೂಲಿ ಹೆಚ್ಚಳ

0
169

 
ನಮ್ಮ ಪ್ರತಿನಿಧಿ ವರದಿ
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ಕಳೆದ 3 ದಿನಗಳಿಂದ 1500ಕ್ಕೂ ಹೆಚ್ಚು ಜನರಿಂದ ಕೈಕೊಳ್ಳಲಾದ ನಾರಾಯಣಪುರ ಕೋಟುಮಚಗಿ ಮಧ್ಯದ ಹುಲಗಿ ಹಳ್ಳದ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಯನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ವೀಕ್ಷಿಸಿದರು.
 
 
 
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಬರುವ ಏಪ್ರಿಲ್ ಮಾಹೆಯಿಂದ ಉದ್ಯೋಗ ಖಾತ್ರಿ ಕೂಲಿ 224ರೂ ಗಳಿಂದ 236ಕ್ಕೆ ಹೆಚ್ಚಿಸಲಾಗುವುದು. ಮಳೆಯಾಗಿ ಕೃಷಿ ಚಟುವಟಿಕೆ ಆರಂಭವಾಗುವವರೆಗೂ ಉದ್ಯೋಗ ನೀಡಲಾಗುವುದು. ಕಾಮಗಾರಿ ಸ್ಥಳದಲ್ಲಿ ಕೆಲಸಗಾರರ ಮಕ್ಕಳಿಗೆ ಸೂಕ್ತ ಆರೈಕೆ, ಕಾಳಜಿಗೆ ಮತ್ತು ಎಲ್ಲರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲು , ತಕ್ಷಣದ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸಲು ನಿರ್ದೇಶನ ನೀಡಲಾಗಿದೆ. ಈ ಸೌಲಭ್ಯ ಒದಗಿಸಲು ನಿರ್ಲಕ್ಷಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಜಿ.ಪಂ.ಸಿಇಓ ಅವರಿಗೆ ಸೂಚಿಸಲಾಗಿದೆ ಎಂದರು.
 
 
 
ಬಡ್ಡಿ ಸೇರಿಸಿ ಕೂಲಿ ಪಾವತಿ:
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಪಾವತಿ ಅವಧಿ ಸರಾಸರಿ 33 ದಿನ ಇದ್ದದ್ದು 15 ದಿನಕ್ಕೆ ಇಳಿಸಲಾಗಿದ್ದು ಇದನ್ನು ಮೀರಿದ ಅವಧಿಯಲ್ಲಿ ಪಾವತಿಸುವ ಒಟ್ಟು ಕೂಲಿ ಮೊತ್ತಕ್ಕೆ 0.5% ಬಡ್ಡಿ ಸೇರಿಸಿ ಕೆಲಸಗಾರರಿಗೆ ಪಾವತಿಸಲು ನಿಣ೯ಯಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯದ ಭೀಕರ ಬರಗಾಲದ ಸಂಕಷ್ಟ ಅವಧಿಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ, ಜನರಿಗೆ ನೀರು ಪೂರೈಕೆ ಮತ್ತು ಜಾನುವಾರುಗಳಿಗೆ ಮೇವು ಪೂರೈಕೆಗೆ ರಾಜ್ಯ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಸಚಿವರು ನುಡಿದರು.

LEAVE A REPLY

Please enter your comment!
Please enter your name here