ಏಕಾಗ್ರತೆಯಿಂದ ಶ್ರಮವಹಿಸಿದರೆ ಯಶಸ್ಸು ಸಾಧ್ಯ

0
207

ಉಜಿರೆ ಪ್ರತಿನಿಧಿ ವರದಿ
ಕ್ರೀಡೆಗೆ ಶಿಸ್ತು ಮತ್ತು ಶ್ರಮ ತುಂಬಾ ಮುಖ್ಯ. ಕ್ರೀಡಾ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆ ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ದಿನೇಶ್ ಚೌಟ ಹೇಳಿದರು.
 
 
ಇವರು ಇತ್ತೀಚೆಗೆ ಉಜಿರೆ ಎಸ್.ಡಿ.ಎಮ್. ಕಾಲೇಜಿನ ಕ್ರೀಡಾಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯವಾದ ಅಂಶ. ನಮ್ಮ ಕಾಲೇಜಿನ ಅನೇಕ ಕ್ರೀಡಾ ವಿದ್ಯಾರ್ಥಿಗಳು ಇಂದು ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ತರಬೇತಿಯನ್ನು ಪಡೆದು ತಂದೆ- ತಾಯಿಗಳಿಗೆ, ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಶುಭಹಾರೈಸಿದರು.
 
 
ಕ್ರೀಡಾ ಸಂಘದ ಕಾರ್ಯದರ್ಶಿ ಬಾಲಭಾಸ್ಕರ್ ಮಾತನಾಡಿ ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆ ಉಚಿತ ವಸತಿ, ಶಿಕ್ಷಣವನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಹದಿನೈದು ಜನರಿಂದ ಆರಂಭಗೊಂಡ ಕ್ರೀಡಾ ಸಂಘ ಇಂದು ನೂರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಇದು ಸಂತಸದ ವಿಚಾರ ಎಂದರು.
 
 
ಈ ಸಂದರ್ಭದಲ್ಲಿ ಕ್ರೀಡಾ ವಿಭಾಗದ ಭಿತ್ತಿಪತ್ರಿಕೆ ಕ್ರೀಡಾವಾಣಿ ಅನಾವರಣಗೊಳಿಸಲಾಯಿತು. ಕ್ರೀಡಾಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತರಬೇತುದಾರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾರದಾ ಬಾರ್ಕೂರ್ ನಿರೂಪಿಸಿ, ಬಾಲಭಾಸ್ಕರ್ ಸ್ವಾಗತಿಸಿ, ಸಂದೇಶ್ ಪೂಂಜಾರವರು ವಂದಿಸಿದರು.

LEAVE A REPLY

Please enter your comment!
Please enter your name here