ಏಂಕಾಗಿ ವೃದ್ದನಿಗೆ ನೆರವಾದ ಯುವಕರು

0
20184
ಈ ಯುವಕರು ಎಲ್ಲರಿಗೂ ಮಾದರಿ...

ಮೂಡುಬಿದಿರೆ: ಯೆಸ್ …ಇದೊಂದು ಪಾಸಿಟಿವ್ ಸ್ಟೋರಿ…ಕೊರೊನಾ ಸಂದರ್ಭದಲ್ಲೂ ಯುವಕರು ಮಾನವೀಯತೆ ಮೆರೆದಿದ್ದಾರೆ. ಹೌದು ಪಾಲಡ್ಕ ಗ್ರಾಮ ಪಂಚಾಯತಿ ವ್ಯಾಪ್ತಿಯ ವರ್ಣಬೆಟ್ಟು ಸಮೀಪದ ಶೆಡ್ಯ ನೇರಲ್ಪಲ್ಕೆ ನಿವಾಸಿ ನೀಲಾಧರ್ ಮೇರಾ ಮಾನಸಿಕ ಅಸ್ವಸ್ಥರು. ಕಳೆದ ೧೫ವರುಷಗಳಿಂದಲೂ ಆಗಲೋ ಈಗಲೋ ಎಂಬ ಮುರುಕು ಜೋಪಡಿಯಲ್ಲಿ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದರು. ಪ್ರಕೃತಿಯ ವೈಪರೀತ್ಯದ ಮದ್ಯೆ ಈ ವೃದ್ಧ ಏಕಾಂಗಿಯಾಗಿ ಹರಕು ಜೋಪಡಿಯಲ್ಲಿರುವುದನ್ನು ಅರಿತ ಪಾಲಡ್ಕ ಶ್ರೀನಿಧಿ ಸೌಂಡ್ಸ್ ಇದರ ಮಾಲಕರು ಹಾಗೂ ಸಿಬ್ಬಂದಿ ವರ್ಗದಿಂದ ತಾತ್ಕಾಲಿಕವಾಗಿ ತಗಡು ಶೀಟ್ ಹಾಕಿ ಶೆಡ್ ನಿರ್ಮಿಸಿಕೊಟ್ಟರು.

ಮುರುಕಲು ಜೋಪಡಿಯಲ್ಲಿದ್ದ ವೃದ್ಧ

ಜೊತೆಗೆ ಒಂದಷ್ಟು ದಿನಸಿಗಳನ್ನು ನೀಡಿ ಆಹಾರ ಸಹಕಾರವನ್ನು ಮಾಡಿದರು. ಈ ಯುವಕರ ಮಾನವೀಯತೆ ಇದೀಗ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ. ದಾನಿಗಳು ಮುಂದೆ ಬಂದರೆ ಏಕಾಂಗಿ ವೃದ್ಧನಿಗೆ ಸೂರು ಕಟ್ಟಿಕೊಡುವ ಇರಾದೆ ಮಹೇಶ್ ಜೆ ಕೋಟ್ಯಾನ್ ಅವರಿಗಿದೆ. ಆಸಕ್ತರು ಮಹೇಶ್ ಅವರ 99009 30198 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here