ಎಸ್ ಪಿ ತ್ಯಾಗಿಗೆ ಬೇಲ್

0
279

ರಾಷ್ಟ್ರೀಯ ಪ್ರತಿನಿಧಿ ವರದಿ
ಬಹುಕೋಟಿ ಅಗಸ್ಟಾ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಮಾಜಿ ವಾಯುಸೇನಾ ಮುಖ್ಯಸ್ಥ ಎಸ್ ಪಿ ತ್ಯಾಗಿಗೆ ಬೇಲ್ ಸಿಕ್ಕಿದೆ. ಪಟಿಯಾಲಾ ಹೌಸ್ ಕೋರ್ಟ್ ನಿಂದ ತ್ಯಾಗಿಗೆ ಜಾಮೀನು ಸಿಕ್ಕಿದೆ.
 
3,600ಕೋಟಿ ಹಗರಣದಲ್ಲಿ ತ್ಯಾಗಿಯನ್ನು ಬಂಧಿಸಲಾಗಿತ್ತು. ಎಸ್ ಪಿ ತ್ಯಾಗಿ, ಸಂಬಂಧಿ ಸಂಜೀವ್ ತ್ಯಾಗಿ ಮತ್ತು ವಕೀಲ್ ಗೌತಮ್ ಖೇತಾನ್ ಎಂಬುವವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದೀಗ ತ್ಯಾಗಿ ಬೇಲ್ ನಿಂದ ಸಿಬಿಐ ಗೆ ಹಿನ್ನೆಡೆಯಾಗಿದೆ.
 
ಕೋರ್ಟ್ ಅನುಮತಿಯಿಲ್ಲದೆ ದೇಶಬಿಟ್ಟು ತೆರಳುವಂತಿಲ್ಲ. ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಪಟಿಯಾಲ ಕೋರ್ಟ್ ಷರತ್ತು ವಿಧಿಸಿ ಜಾಮೀನು ನೀಡಿದೆ. .

LEAVE A REPLY

Please enter your comment!
Please enter your name here