ಎಸ್.ಡಿ.ಎಮ್ ಪದವಿ ಕಾಲೇಜಿಗೆ ಸಮಗ್ರ ಚಾಂಪಿಯನ್ ಶಿಪ್

0
208

ಉಜಿರೆ ಪ್ರತಿನಿಧಿ ವರದಿ
ಕೆ.ಎ ಕೃಷ್ಣಮೂರ್ತಿ ಜನ್ಮ ದಿನಾಚರಣೆ ಸ್ಮರಣಾರ್ಥ ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು ಇಲ್ಲಿ ನಡೆದ “ಗಣಿತೋತ್ಸವ 2016” ಸ್ಪರ್ಧೆಗಳಲ್ಲಿ ಶ್ರೀ.ಧ.ಮಂ ಪದವಿ ಕಾಲೇಜು ಸಮಗ್ರ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡಿದೆ.
 
 
ರಸಪ್ರಶ್ನೆ ವಿಭಾಗದಲ್ಲಿ ವಿನಾಯಕ ಭಟ್ ಹಾಗೂ ಶ್ರಾವ್ಯ ತಂಡ ಪ್ರಥಮ ಸ್ಥಾನ, ವಿದ್ಯಾರ್ಥಿ ಉಪನ್ಯಾಸ ಸ್ಪರ್ಧೆಯಲ್ಲಿ ವಿಜೇತಾ ಪೈ ದ್ವಿತೀಯ ಸ್ಥಾನ ಹಾಗೂ ಗಣಿತ ಮಿನುಗುತಾರೆ ಸ್ಪರ್ಧೆಯಲ್ಲಿ ಅಕ್ಷತಾ ಟಿ.ಡಿ ಪ್ರಭು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
 
 
ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ವಿವಿಧ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.

LEAVE A REPLY

Please enter your comment!
Please enter your name here