ಎಸ್ ಐ ಓ ದ.ಕ‌. ನೂತನ‌‌ ಜಿಲ್ಲಾಧ್ಯಕ್ಷರಾಗಿ ತಲ್ಹಾ ಇಸ್ಮಾಯೀಲ್ ಆಯ್ಕೆ

0
249

 
ಮಂಗಳೂರು ಪ್ರತಿನಿಧಿ ವರದಿ
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯಾಗಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಇದರ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ತಲ್ಹಾ ಇಸ್ಮಾಯೀಲ್ ಕೆ.ಪಿ.‌ಬೆಂಗ್ರೆ ಆಯ್ಕೆಯಾಗಿದ್ದಾರೆ.
 
 
 
ನಗರದ ಬಂದರ್ ಬೀಬಿ ಅಲಾಬಿ ರಸ್ತೆಯ ಹಿದಾಯತ್ ಸೆಂಟರ್ ನಲ್ಲಿರುವ ಎಸ್ ಐ ಓ ದ.ಕ. ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ‌‌‌ ಸದಸ್ಯರ ಸಭೆಯಲ್ಲಿ 2017ನೇ ಸಾಲಿಗೆ ಅಧ್ಯಕ್ಷರಾಗಿ ತಲ್ಹಾ ಇಸ್ಮಾಯೀಲ್ ರನ್ನು ಆಯ್ಕೆ ಮಾಡಲಾಯಿತು.
 
 
ಕೇರಳದ ಶಾಂತಪುರಂ ಅರೇಬಿಕ್ ಕಾಲೇಜಿನಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಪೂರೈಸಿರುವ ಇವರು ಉತ್ತಮ ವಾಗ್ಮಿಯಾಗಿದ್ದಾರೆ. ಪ್ರಸ್ತುತ ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್ ಎಲ್ ಬಿ ಪದವಿ ಪಡೆಯುತ್ತಿದ್ದಾರೆ. ಎಸ್ ಐ ಓ‌ ಕರ್ನಾಟಕ ರಾಜ್ಯ ಸಲಹಾ ಸಮಿತಿಯ (ZAC) ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿರುವ ಇವರು, ಮಂಗಳೂರಿನ ಕಸ್ಬಾ ಬೆಂಗ್ರೆಯ ನಿವಾಸಿಯಾಗಿದ್ದಾರೆ.
 
 
 
ಇದೇ ವೇಳೆ ಜಿಲ್ಲೆಯ ನೂತನ ಕಾರ್ಯದರ್ಶಿಯಾಗಿ ಆಶಿಕ್ ಹಶಾಶ್ ರವರನ್ನು ನೇಮಕ‌ ಮಾಡಲಾಯಿತು. ಇವರು, ಹಿಂದಿನ ಅವಧಿಯಲ್ಲಿ ಮಂಗಳೂರು ತಾಲೂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
 
 
ಚುನಾವಣೆಯ ಮೇಲ್ವಿಚಾರಣೆಯನ್ನು ಎಸ್ ಐ ಓ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ದಾನೀಶ್ ಪಾಣೆಮಂಗಳೂರು ವಹಿಸಿದ್ದರು. ಎಸ್ ಐ ಓ‌‌ ಮಾಜಿ‌ ಸದಸ್ಯ ಫರ್ವೇಝ್ ಮಂಗಳೂರು ಚುನಾವಣಾ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ‌ಈ ಸಂದರ್ಭದಲ್ಲಿ ಎಸ್ ಐ ಓ ಕೇಂದ್ರ ಸಲಹಾ ಸಮಿತಿಯ ಸದಸ್ಯರಾದ ಸಾದಾತ್ ಹುಸೈನ್ ಖಲೀಫ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here