ಎಸ್ ಇಝೆಡ್ ನಲ್ಲಿ ಭಾರೀ ಅಗ್ನಿ ದುರಂತ

0
306

ರಾಷ್ಟ್ರೀಯ ಪ್ರತಿನಿಧಿ ವರದಿ
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ. ವಿಶಾಖಪಟ್ಟಣಂ ಸಮೀಪ ಜೈವಿಕ ತೈಲ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ದುವ್ವಾಡದ ಬಯೋಮ್ಯಾಕ್ಸ್ ತೈಲ ಘಟಕದಲ್ಲಿ ಅವಘಡ ಸಂಭವಿಸಿದೆ.
 
 
 
ಮಂಗಳವಾರ ರಾತ್ರಿ 10 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಲ್ಲಿ 8 ತೈಲ ಟ್ಯಾಂಕರ್ ಗಳು ಸ್ಫೋಟಗೊಂಡಿದೆ. ಇದರಿಂದ ತೈಲ ಸಂಗ್ರಹ ಟ್ಯಾಂಕರ್ ಗಳು ಹೊತ್ತಿ ಉರಿಯುತ್ತಿದೆ. ಭಾರಿ ಅಗ್ನಿ ಅವಘಡದ ಪರಿಣಾಮ 120 ಕೋಟಿ ರೂ, ನಷ್ಟವಾಗಿದೆ.
 
 
 
ಬೆಂಕಿಯ ಕೆನ್ನಾಲಿಗೆಗೆ 18 ಟ್ಯಾಂಕರ್ ಗಳು ಧಗಧನೆ ಹೊತ್ತಿ ಉರಿಯುತ್ತಿದೆ. ಘಟಕದಲ್ಲಿದ್ದ ಇನ್ನಿತರೆ ಕಚ್ಚಾ ವಸ್ತುಗಳು ಬೆಂಕಿಗಾಹುತಿಯಾಗಿದೆ. 6 ಘಟಕಗಳಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. 40 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದೆ.
 
 
 
ನೌಕಾದಳದ 12 ಅಗ್ನಿಶಾಮಕ ವಾಹನಗಳಿಂದಲೂ ಕಾರ್ಯಾಚರಣೆ ನಡೆದಿದೆ. ನೌಕಾಪಡೆಯ ವಿಶೇಷ ಹೆಲಿಕಾಪ್ಟರ್ ಅನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಘಟಕದಲ್ಲಿರುವ ಬೆಂಕಿ ನಮದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
 
 
 
ಆಕಸ್ಮಿಕ ಘಟನೆ ನಡೆದಾಗ ಘಟಕದಲ್ಲಿ 10-15 ನೌಕರರು ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಪ್ರಸ್ತುತ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದ ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ.
 
 
ಘಟನಾ ಸ್ಥಳಕ್ಕೆ ಆಂಧ್ರ ಮಾನವ ಸಂಪನ್ಮೂಲ ಸಚಿವ ಗಂಟಾ ಶ್ರೀನಿವಾಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here