ಎಸ್ಕಲೇಟರ್‌ಗಳಿಗೆ ಚಾಲನೆ

0
580

ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಎರಡು ಎಸ್ಕಲೇಟರ್‌ಗಳಿಗೆ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಚಾಲನೆ ನೀಡಿದರು.
 
 
ನಗರ ಕೇಂದ್ರ ರೈಲ್ವೆ ನಿಲ್ದಾಣದಲ್ಲಿನ ಪ್ರಮುಖ ಬೇಡಿಕೆಗಳಲ್ಲಿ ಎಸ್ಕಲೇಟರ್ ಕೂಡಾ ಒಂದಾಗಿತ್ತು. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.
 
 
ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಮಾರ್ಗವಾಗಿ ಪ್ರತಿನಿತ್ಯ 52 ರೈಲುಗಳು ಸಂಚರಿಸುತ್ತವೆ. ಸುಮಾರು 27,000 ಪ್ರಯಾಣಿಕರು ರೈಲ್ವೆ ನಿಲ್ದಾಣದ ಪ್ರಯೋಜನ ಪಡೆಯುತ್ತಿದ್ದು, ಅವರಿಗೆ ಎಸ್ಕಲೇಟರ್‌ ನೆರವಾಗಲಿದೆ.

LEAVE A REPLY

Please enter your comment!
Please enter your name here