ಎಲ್ಲೆಡೆಯಂತಲ್ಲ ಇಲ್ಲಿನ ಉತ್ಸವ!!!

0
935

ಮೂಡುಬಿದಿರೆಯಲ್ಲಿ ವೈಭವದ ಶ್ರೀಕೃಷ್ಣ ಜನ್ಮಾಷ್ಟಮಿ
ಮೂಡುಬಿದಿರೆ: ಐತಿಹಾಸಿಕ ಮೂಡುಬಿದಿರೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವೈಭವದಿಂದ ನಡೆಯಿತು. ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಹಾಗೂ ಹೊಸಂಗಡಿ ಗೋಪೀನಾಥ ದೇವಸ್ಥಾನದಲ್ಲಿ ರಾತ್ರಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ, ಪುನಸ್ಕಾರ, ಅಘ್ರ್ಯ ಪ್ರಧಾನ ಕಾರ್ಯಕ್ರಮಗಳು ನಡೆದವು. ಭಕ್ತಾಧಿಗಳು ಶ್ರೀದೇವರ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡು ಪುನೀತರಾದರು.

ಭಾರೀ ಮಳೆ: ರಾತ್ರಿಯ ವೇಳೆಗೆ ಕೃಷ್ಣ ಜನನ ಸಮಯಕ್ಕೆ ಮೂಡುಬಿದಿರೆ ಆಸುಪಾಸಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಆಸ್ತಿಕ ಭಕ್ತವೃಂದಕ್ಕೆ ಅತ್ಯಂತ ಸಂತಸ ತಂದೊಡ್ಡಿತು. ಹಲವು ವರುಷಗಳಿಂದ ಈ ರೀತಿಯ ಅಷ್ಟಮಿ`ಮಳೆ’ಯನ್ನು ಜನತೆ ನೋಡಿರಲಿಲ್ಲವಂತೆ.!

ಮೊಸರುಕುಡಿಕೆ ಉತ್ಸವ:
ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವಕ್ಕೆ ತನ್ನದೇ ಆದ ವೈಶಿಷ್ಟ್ಯತೆಯಿದೆ. ಮೂಡುಬಿದಿರೆಯ ರಾಜಬೀದಿಗಳಲ್ಲಿ ಅಲ್ಲಲ್ಲಿ ಅಲ್ಲಲ್ಲಿ ಕಟ್ಟಿರುವ ವಿವಿದ ಗಾತ್ರಗಳ ಆಕರ್ಷಕ ಮೊಸರು ಕುಡಿಕೆಗಳನ್ನು ಯಕ್ಷಗಾನೀಯ ಶೈಲಿಯ `ಶ್ರೀಕೃಷ್ಣ ವೇಷಧಾರಿ’ ಒಡೆಯುವ ಮೂಲಕ ಅತ್ಯಂತ ಶ್ರದ್ಧಾ ಭಕ್ತಿ ಉತ್ಸಾಹಗಳಿಂದ ಆಚರಿಸಲಾಯಿತು. ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನದಿಂದ ದೇವರ ಮೆರವಣಿಗೆ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗುತ್ತಿರುವಂತೆಯೇ ಶ್ರೀಕೃಷ್ಣ ವೇಷಧಾರಿ ಮೊಸರು ಕುಡಿಕೆಗಳನ್ನು ಒಡೆಯುತ್ತಾ ಸಾಗುವ ದೃಶ್ಯ ಮನಮೋಹಕವಾಗಿತ್ತು. ಮೂಡುಬಿದಿರೆಯ ಪುರಭಕ್ತ ಸಮೂಹ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು.

ಶನಿವಾರ ಮೂಡುಬಿದಿರೆಯಲ್ಲಿ ವೈಭವದ ಮೊಸರುಕುಡಿಕೆ ಉತ್ಸವ ಹಾಗೂ ಸಾಂಸ್ಕøತಿಕ ಕಲಾಪಗಳು ಸಂಪನ್ನಗೊಂಡಿತು. ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವಕ್ಕೆ ತನ್ನದೇ ಆದ ವೈಶಿಷ್ಟ್ಯತೆಯಿದೆ. ಜನತೆ ಉತ್ಸಾಹದಿಂದ ಹಬ್ಬದ ಸಡಗರದಲ್ಲಿ ಪಾಲ್ಗೊಂಡರು. ಮೂಡುಬಿದಿರೆಯ ಹಲವೆಡೆಗಳಲ್ಲಿ ಸಾಂಸ್ಕøತಿಕ ಕಲಾಪಗಳು ನಡೆದವು.

ಮಕ್ಕಳಿಗೆ ರಜೆಯ ಮಜಾ: ಮೊಸರು ಕುಡಿಕೆ ಉತ್ಸವದ ಅಂಗವಾಗಿ ಮೂಡುಬಿದಿರೆಯ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ರಜೆ ನೀಡಿತ್ತು.

Advertisement

LEAVE A REPLY

Please enter your comment!
Please enter your name here