ಎಲ್ಲರ ಮನೆಗೆ ಬಂದಿದ್ದಾಳೆ ಗೌರಿ…

0
500

ಇಂದಿನ ವಿಶೇಷ ಲೇಖನ
ಇಂದು ಗೌರಿ ಗಣೇಶ ಹಬ್ಬವಾಗಿದೆ. ಗೌರಿ ಹಬ್ಬದಲ್ಲಿ ಬಾಗಿನ ನೀಡುವುದು ಒಂದು ವಿಶೇಷ ಹಾಗೂ ಮುಖ್ಯವಾದ ಸಂಪ್ರದಾಯವಾಗಿದೆ. ವಿವಾಹಿತ ಮಹಿಳೆಯರಿಗೆ ತವರು ಮನೆಯಿಂದ ಉಡುಗೊರೆ ಹಾಗೂ ಬಾಗಿನ ಕೊಡುವ ಸಂಪ್ರದಾಯವಿದೆ. ಬಾಗಿನದಲ್ಲಿ ವಿವಿಧ ರೀತಿಯ ವಸ್ತುಗಳಾದ ಅರಶೀನ, ಕುಂಕುಮ, ಕಪ್ಪು ಬಳೆಬಿಚ್ಚೋಲೆ, ಕಪ್ಪು ಮಣಿಗಳು, ಬಾಚಣಿಗೆ, ಸಣ್ಣ ಕನ್ನಡಿ, ತೆಂಗಿನಕಾಯಿ, ಐದು ಬಗೆಯ ಹಣ್ಣು, ರವಿಕೆ ಕಣ ಅಥವಾ ಸೀರೆ, ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಬೆಲ್ಲವಿರುತ್ತದೆ. ವ್ರತಕ್ಕಾಗಿ ಸುಮಾರು ಐದು ಬಾಗಿನಗಳನ್ನು ತಯಾರಿಸಲಾಗುತ್ತದೆ.
 
ಹೆಣ್ಣು ಮಕ್ಕಳು ಮೊರದ ಬಾಗಿನ ಕೊಟ್ಟುತೆಗೆದುಕೊಳ್ಳುವುದು ಸಂಪ್ರದಾಯ. ಹಾಗಾದರೆ  ಮರದ ಬಾಗಿನದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳ ಬಗ್ಗೆ ತಿಳಿದುಕೊಳ್ಳುವ:
 
೧. ಅರಿಸಿನ : ಗೌರಿದೇವೀ.
೨. ಕುಂಕುಮ : ಮಹಾಲಕ್ಷ್ಮೀ
೩. ಸಿಂಧೂರ : ಸರಸ್ವತೀ
೪. ಕನ್ನಡಿ : ರೂಪಲಕ್ಷ್ಮೀ
೫. ಬಾಚಣಿಗೆ : ಶೃಂಗಾರಲಕ್ಷ್ಮೀ
೬. ಕಾಡಿಗೆ : ಲಜ್ಜಾಲಕ್ಷ್ಮೀ
೭. ಅಕ್ಕಿ : ಶ್ರೀ ಲಕ್ಷ್ಮೀ
೮. ತೊಗರಿಬೇಳೆ : ವರಲಕ್ಷ್ಮೀ
೯. ಉದ್ದಿನಬೇಳೆ : ಸಿದ್ದಲಕ್ಷ್ಮೀ
೧೦. ತೆಂಗಿನಕಾಯಿ : ಸಂತಾನಲಕ್ಷ್ಮೀ
೧೧. ವೀಳ್ಯದ ಎಲೆ : ಧನಲಕ್ಷ್ಮೀ
೧೨. ಅಡಿಕೆ : ಇಷ್ಟಲಕ್ಷ್ಮೀ
೧೩. ಫಲ(ಹಣ್ಣು) : ಜ್ಞಾನಲಕ್ಷ್ಮೀ
೧೪. ಬೆಲ್ಲ : ರಸಲಕ್ಷ್ಮೀ
೧೫. ವಸ್ತ್ರ : ವಸ್ತ್ರಲಕ್ಷ್ಮೀ
೧೬. ಹೆಸರುಬೇಳೆ : ವಿದ್ಯಾಲಕ್ಷ್ಮೀ
ಮುತ್ತ್ತೈದೆ ದೇವತೆಯರು 16 ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ. ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ.
ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿನ ಕೊಡುತ್ತಾರೆ.. ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ. ಮೊರದಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ.
ಮೊರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ ಬಾಗಿನ ಕೊಡುತ್ತಾರೆ.

LEAVE A REPLY

Please enter your comment!
Please enter your name here