ಎಲೆ ಈಗ ಅದೇ ಎಲ್ಲಾ!

0
346

ಮಸೂರ ಅಂಕಣ: ಆರ್ ಎಂ ಶರ್ಮಾ
ಹಿಂದೆಲ್ಲಾ ಹಳ್ಳಿಮನೆಗಳಿಗೆ-ಮಣ್ಣಿನ ಗೋಡೆಗಳು.
ಮಣ್ಣಿನಗೋಡೆಗೆ ಓಡವೆ-ಎಲೆ/ಸೊಪ್ಪು,ಒಣಗಿದ/ಹಸಿ ಗಿಡದ ಕಡ್ಡಿಗಳುಅಷ್ಟೇ.
ಆಗೋಡೆಗಳಿಗೆ ಸುಣ್ಣವೇ ಸಕಲ-ಬಣ್ಣವಿಲ್ಲ.
ಸುಣ್ಣ ಬಿಳಿಯಾದರೂ-ಗೋಡೆಮಣ್ಣಿನದು ಅದಕ್ಕೇ ಬಿಳಿಯ ಪ್ರತಿಫಲನವಿಲ್ಲಾ-ಹಾಗಾಗಿ-ಹಾಡುಹಗಲಿನಲ್ಲೂ ಕತ್ತಲೆಯೆ ಅನುಭವ.
ಹೆಂಚಿನ ಮೂಲಕ ಬೆಳಕು,ಬಾಗಿಲ ಮೂಲಕ ಬೆಳಕು,ಕಿಟಕಿಯ ಮೂಲಕ ಬೆಳಕು ಅದೇ ಬೆಳಕಿನ ಸಡಗರ.
ಈಗ ಕಾಲಬದಲಾಯಿತು.
ಆಧುನಿಕ ಜಗತ್ತು,ಜನ,ಮನ,ಇಛ್ಚೆ-ನಾಗರಿಕತೆ ಗರಿ ಕೆದರಿಕೊಂಡು ನಾವಿನ್ಯತೆ-ನಾಜೂಕು ಇವೇ ಸಾಮಯಿಕ ಸಂಗತಿಗಳು/ಸಂಗಾತಿಗಳು.
ಎಲೆ ಹೋಯಿತು-ಕಳೆ ಬಂದಿತು-ಬೆಳೆಯಿತು-ಬಣ್ಣ-ಒಪ್ಪ-ಓರಣ-ಕಾರಣ.
ಬಣ್ಣಕ್ಕೆ ತಕ್ಕುದಾದ ಗೋಡೆ-ಇನ್ನಿಲ್ಲ ಯಾವುದರ ಗೊಡವೆ.
ಬಣ್ಣ-ಮನಸ್ಸಿಗೆ ಹಿತ,ಹಣಕ್ಕೆ ಹಿತ,ಋತುಗಳಿಗೆಹಿತ,ಹಿತಗಳಿಗೂಹಿತ.
ಒಟ್ಟಿನಲ್ಲಿ ಬಣ್ಣದ ಬದುಕು ಚಿತ್ರಮಯ-ವಿಚಿತ್ರಮಯ-ವಿಸ್ಮಯ.
ಬಣ್ಣದಿಂದ ಆರೋಗ್ಯ,ಬಣ್ಣದಿಂದ ಚಟುವಟಿಕೆ,ಬಣ್ಣದಿಂದ ಗೌರವ-ಬಣ್ಣ ವಿರಾಟ್ ಸ್ವರೂಪ-ಕಥೆಯೇ ಉಸ್ಸಪ್ಪ.
ದೊಡ್ಡ ದೊಡ್ಡ ಸಂಸ್ಥೆಗಳು ಬಣ್ಣತಯಾರಿಕೆಗೆ,ಬಣ್ಣ ಬಳಿಯಲು,ಹಣಕಬಳಿಸಲು.
ಬಣ್ಣದ ಕಸುಬು ನಿಬ್ಬೆರಗಾಗಿಸುವುದು.
ಈಗ ಗೋಡೆ-ತಡೆಯಲ್ಲ,ಮರೆಯಲ್ಲ,ತಂಟೆಯಲ್ಲ-
ಆದರೆ-ಜೀವನಸ್ನೇಹಿ,ಪರಿಸರ ಸ್ನೇಹಿ.
ಗೋಡೆಗೆ ಕಿವಿ-ಅಂದರೆ ಪತ್ತೇದಾರಿ ಕಾಯಕ,ಗೋಡೆಯಿಂದ ವಿದ್ಯುತ್ ಉತ್ಪಾದನೆ,ಗೋಡೆಯಿಂದ ವಿಶೇಷ ತಂಪು,ಮಾಸಲಾದರೆ ತೊಳೆಯಬಹುದಾದ ರಚನೆ-ಬಣ್ಣ ಇತರ ಸಂಪನ್ಮೂಲಗಳು ಅಲ್ಲಿ ಬಳಸಲ್ಪಟ್ಟಿವೆ/ಬಳಸಲ್ಪಡುತ್ತವೆ.
ಬಣ್ಣದ ತಯಾರಿಕೆಗೆ ಕಚ್ಚಾಮಾಲಾಗಿ ಈಗ ಕೆಸುವಿನ ಎಲೆ ರೂಢಿಯಾಗುತ್ತಿದೆ.
ಹಸಿರು ಎಲೆ ವನರಾಜಿ ಅಷ್ಟೇ ಅಲ್ಲ ಗೋಡೆ ರಾರಾಜಿಸಲೂ ಸಹಕಾರಿ.
ಇದೇ ಎಲೆಯ ಬೆಲೆ-ಬಲ-ಬೆಂಬಲ.
ಕೆಸುವಿನ ಎಲೆಯ ಬಳಕೆಗೆ-ಭಾರತದ-ಕನಾ೯ಟಕದ ಅದರಲ್ಲಿಯೂ ದಕ್ಷಿಣ ಕನ್ನಡದ ನೆಲದ ಸಿರಿ-ಒಬ್ಬ ಪ್ರೌಢಶಾಲಾ ವಿದ್ಯಾಥಿ೯ನಿಯ ಕೊಡುಗೆ.
ಈ ಅನ್ವೇಷಣೆ ಜಾಗತಿಕಮಟ್ಟದಲ್ಲಿ ಜ್ವಾಜ್ವಲ್ಯಮಾನ-ಅದೇ ಸಂಭ್ರಮ-ವಿಕ್ರಮ-ವಿಶ್ವಮಯ.
ಆ ಬಾಲಪ್ರತಿಭೆ-ಬಾಲಕಿಪ್ರತಿಭೆ-ಪುತ್ತೂರಿನ ವಸತಿ ಶಾಲೆಯೊಂದರ ವಿದ್ಯಾಥಿ೯ನಿ-ಅನಿಶಾ ನಾಯಕ್.
ಈ ಅನ್ವೇಷಣೆಯ ಯಾಥಾಥ್ಯ೯-ಕೆಸುವಿನ ಎಲೆಯ ಮಿಶ್ರಣ ಗೋಡೆಯ ಬಣ್ಣಗಳಲ್ಲಿ-ಗೋಡೆಗಳಮೇಲೆ ಕಾಣಿಸುವ -“ಫ಼ಂಗಸ್” ನ್ನು ತಡೆಯುತ್ತದೆ ಎಂಬುದೇ ಸತ್ಯವಾದ ಮಾತು.
ಇದರಿಂದ ಬಾಳಿಕೆ,ಹಣದ ಉಳಿತಾಯ,ಸಮಯದ ಉಳಿತಾಯ,ಶಕ್ತಿಯ(ಜನಬಲದ)ಉಳಿತಾಯ ಇವೆಲ್ಲಾ ಲಾಭಗಳು.
ಕೆಸುವು ಅಡಿಗೆ ಮನೆ-ಹುಳಿ,ಚಟ್ನಿ,ಪಲ್ಯ,ಪತ್ರೊಡೆ ಇವಕ್ಕ ಸಡ್ಡುಹೊಡೆದು-ಸೈಡುಹೊಡೆದು-ಬಣ್ನಕ್ಕೆ ತಿರುಗಿತು-ಬೆವರಿಳಿಸಿತು.
ಈ ಅನ್ವೇಷಣೆಯ ಘೋಷಣೆಯೇ-“ಲೀಫ಼್ ಆಸ್ ಎ ವಾಲ್ ಪ್ರೊಟೆಕ್ಟರ್”-ಎಂಬುದಾಗಿ ಪ್ರತಿಪಾದಿಸಲ್ಪಟ್ಟಿದೆ.
ಈ ಅನ್ವೇಷಣೆಯ ರೋಚಕ-ಮೌಲಿಕ ಸಂಗತಿಗಳೆಂದರೆ-
ಪ್ರಪಂಚದ ೬೨ ದೇಶಗಳ ಸ್ಪಧೆ೯ಯಲ್ಲಿ ಜಗತಿಕ ಮಟ್ಟದಲ್ಲಿ ೩ನೇ ಸ್ಥಾನ ಗಿಟ್ಟಿಸಿಕೊಂಡದ್ದು.
ದಕ್ಷಿಣಭಾರತದ ಏಕೈಕ ಸ್ಪಧಾ೯ಳು.
ಈಕೆಗೆ ಲಭಿಸಿದ ಮಹತಿಗಳು-ರಾಜ್ಕೋಟ್ ನಲ್ಲಿ ಚಿನ್ನದ ಪದಕ-ಸ್ಪ್ಧೆ೯ಯಲ್ಲಿ-ನಾಷನಲ್ ಸೈ ಅತೀ ಅಗತ್ಯನ್ಸ್ ಫ಼ೇರ್,
ಮುಂಬಯಿ ನಲ್ಲಿಯೂ ಹೀಗೆ ಲಭಿಸಿದಸುದ್ದಿ.
ರಾಜ್ಕೋಟ್ ನಲ್ಲಿ ನಡೆದ ಸೈನ್ಸ್ ಎಂಡ್ ಇಂಜಿನಿಯರ್ಸ್ ಫ಼ೇರ್ ನಲ್ಲಿ ಲಭಿಸಿದ ದ್ವಿತೀಯ ಗ್ರಾಂಡ್ ಗೋಲ್ಡ್ ಅವಾರ್ಡ್.
ಈಕೆಯ ಶ್ರೇಯಸ್ಸಿನ ಮೂಲ ಆಕೆಯದೇ ಆದ-ಚಿಂತನ ಮಂಥನದ ಫಲ.
ಪ್ರೋತ್ಸಾಹಕ್ಕೆ ಶಾಲಾ ಶಿಕ್ಷಕಿ-ಮಾಗ೯ದಶ೯ನಕ್ಕೆ-ಸಾಧನಾ ಹೆಬ್ಬಾರ್.
ಅದಕ್ಕೇ ಪುರಂದರದಾಸರ ತುಡಿತ-
“ಏನು ಧನ್ಯಳೋ-ಎಷ್ಟು ಮಾನ್ಯಳೋ ಲಕುಮಿ——–“! ಇಲ್ಲಿ ಸಮಯೋಚಿತ ಮತ್ತು ಮೌಲ್ಯೋಚಿತವೇ ಸರಿ.
ದಾಸರ ಧ್ವನಿಗೆ ಪುಟವಿಟ್ಟಂತೆ ಸನ್ಮಾನ್ಯ ಪ್ರಧಾನ ಮಂತ್ರಿಗಳ ಅಳಲು-ಬಯಕೆ-ಆಢ್ಯ ವಾದ-
“ಬೇಟಿ ಬಚಾವೋ-ಬೇಟಿ ಪಢಾವೋ”-ಮತ್ತೂ ಮಹತ್ವದ್ದಲ್ಲವೇ?
ಈ ಮಾದರಿಯ ನಡೆ-ನುಡಿ ಭಾರತದ ರತ್ನಗಳಲ್ಲದೇ ಮತ್ತೇನು?
ಅದಕ್ಕೇ ರತುನದ ಜತನ ಜಾಣತನ-ಅನುಕ್ಷಣ.
ಬಾಲಪ್ರತಿಭೇ-ಬಾಲಕಿಯರ,ನಂತರ ಸ್ತ್ರೀಯರ ಪ್ರತಿಭೆ ಭಾರತ ದೇಶಕ್ಕೆಅತೀ ಅಗತ್ಯ.
ಇದು ಕತ೯ವ್ಯವಾಗಲಿ,ಕಮ೯ಣ್ಯವಾಗಲಿ,ಮಾನ್ಯವಾಗಲಿ,ಸವ೯ಮಾನ್ಯವಾಗಲಿ.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here