ಎಲೆಕ್ಟ್ರಾನಿಕ್ಸ್ ಅಂಗಡಿ ಧಗಧಗ

0
262

ಬೆಂಗಳೂರು ಪ್ರತಿನಿಧಿ ವರದಿ
 
update news:
ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ಚಿಕ್ಕಪೇಟೆಯ ಬಳಿ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದೆ. ಇಲ್ಲಿನ ಬಿವಿಕೆ ಐಯ್ಯಂಗಾರ್ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಸ್ಫೋಟ ಸಂಭವಿಸಿ ಈ ಅವಘಡ ನಡೆದಿದೆ.
 
ಇಂದು ಬೆಳಗ್ಗೆ 4 ಗಂಟೆಗೆ ಅವಘಡ ಸಂಭವಿಸಿದೆ. 4 ಅಂತಸ್ತಿನ ಕಟ್ಟಡದ ಕೆಳಮಹಡಿಯಲ್ಲಿದ್ದ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಕಟ್ಟಡದಲ್ಲಿದ್ದ ಮಾಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಆಕ್ಸಿಸರೀಸ್ ಅಂಗಡಿ ಹೊತ್ತಿ ಉರಿದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿಯಾಗಿದೆ. ಲೈಟ್ಸ್, ಸ್ವಚ್ ಬೋರ್ಡ್, ವೈರ್ ಗಳು ಬೆಂಕಿಗಾಹುತಿಯಾಗಿದೆ. ಬೆಂಕಿಯ ಜ್ವಾಲೆ 4 ಅಂತಸ್ತಿನ ಕಟ್ಟಡಕ್ಕೂ ವ್ಯಾಪಿಸಿ, ಹೊತ್ತಿ ಉರಿದಿದೆ.
 
ಕಟ್ಟಡದಲ್ಲಿದ ಉಳಿದ ಮೂರು ಮಹಡಿಯಲ್ಲಿ ಜನರು ವಾಸವಾಗಿದ್ದರು. ಅಗ್ನಿ ಆಕಸ್ಮಿಕದಿಂದ ಇಬ್ಬರಿಗೆ ಗಾಯಗಳಾಗಿದ್ದು, ಗ್ರೌಂಡ್ ಫ್ಲೋರ್ ನಲ್ಲಿದ್ದ 2 ಬೈಕ್ ಬೆಂಕಿಗಾಹುತಿಯಾಗಿದೆ. ಅಂಗಡಿಯ ಅಕ್ಕಪಕ್ಕದಲ್ಲಿದ್ದ ಕೆಲ ಮನೆಗಳ ಗಾಜುಗಳಿಗೆ ಹಾನಿಯಾಗಿದೆ.
 
 
ಘಟನಾ ಸ್ಥಳಕ್ಕೆ ಆಗಮಿಸಿದ 15 ಅಗ್ನಿಶಾಮಕ ವಾಹನಗಳ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕೆಯಿಂದ ಅಭಿನಯ ಥಿಯೇಟರ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಚಿಕ್ಕಪೇಟೆ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here