ಎರಡು ವರ್ಷ ಅಮಾನತುಗೊಂಡ ಶರಪೋವಾ

0
360

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಪಂದ್ಯಗಳ ವೇಳೆ ಉದ್ದೀಪನ ಮದ್ದು ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದ ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶೆರಪೋವಾ ಅವರಿಗೆ ಅಂತರ ರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಎರಡು ವರ್ಷ ಆಟದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿದೆ.
 
 
ಶರಪೋವಾ(29) ಹೃದಯ ಕಾಯಿಲೆಗೆ 2006ರಿಂದ ಡ್ರಗ್ ಸೇವಿಸುತ್ತಿದ್ದುದಾಗಿ ಇತ್ತೀಚೆಗೆ ತಪ್ಪೊಪ್ಪಿಕೊಂಡಿದ್ದರು. ಈ ವರ್ಷ ಜನವರಿಯಿಂದ ಅನ್ವಯವಾಗುವಂತೆ ನಿಷೇಧ ಜಾರಿಗೆ ಬರಲಿದೆ. ಅಮಾನತಿನ ವಿರುದ್ಧ ಶರಪೋವಾ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡಿದ್ದಾರೆ.
 
 
 
ಶರಪೋವಾ, ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಒಂದು, ಫ್ರೆಂಚ್‌ ಓಪನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡು ಸಲ ಚಾಂಪಿಯನ್‌ ಆಗಿದ್ದಾರೆ. 2004ರ ವಿಂಬಲ್ಡನ್‌ ಮತ್ತು 2006ರ ಅಮೆರಿಕ ಓಪನ್‌ ಟೂರ್ನಿ ಗಳಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು.
 
 
 
ರಷ್ಯಾದ ಈ ಆಟಗಾರ್ತಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿದ್ದರು. ವಿಂಬಲ್ಡನ್‌ ಟೂರ್ನಿ ಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದಾಗ ಅವರಿಗೆ 17 ವರ್ಷವಾಗಿತ್ತು. 18ನೇ ವಯಸ್ಸಿಗೆ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು. ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಾಗ ಅವರಿಗೆ 19 ವರ್ಷ. ನಂತರದ ವರ್ಷದಲ್ಲಿಯೇ ಅವರು ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

LEAVE A REPLY

Please enter your comment!
Please enter your name here