ಎರಡನೇ ದಿನಕ್ಕೆ ಕಾಲಿಟ್ಟ ಧರಣಿ

0
338

 
ವರದಿ: ಸುನೀಲ್ ಕುಮಾರ್
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ (CITU) ಇದರ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ದ.ಕ ಜಿಲ್ಲಾಧಿಕಾರಿಗಳ ಕಛೇರಿ ಮುಂದುಗಡೆ ಸೋಮವಾರ ಆರಂಭವಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಎರಡನೇ ದಿನವಾದ ಇವತ್ತು ಮುಂದುವರೆದಿದೆ.
 
 
2011-12, 13ರಲ್ಲಿ ಕಾರ್ಮಿಕರ ಅರ್ಜಿಗಳ ವಿಲೆವಾರಿಗಾಗಿ ನೀಡಿದ ಅರ್ಜಿಗಳ ಬಗ್ಗೆ ಆಗಿರುವ ನೂನ್ಯತೆಗಳನ್ನು ಸರಿಪಡಿಸಬೇಕು. ಕಾರ್ಮಿಕರ ನವೀಕರಣ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು. ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳ ಎತ್ತಂಗಡಿ ಆಗಬೇಕು ಎಂಬ ಆರು ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿಗಳು ಮತ್ತು ರಾಜ್ಯದ ಕಾರ್ಮಿಕ ಆಯುಕ್ತರು ಈ ಸಮಸ್ಯೆಗಳನ್ನು ಪರಿಹರಿಸುವತನಕ ಅನಿರ್ದಿಷ್ಟಾವಧಿ ಹೋರಾಟವನ್ನು ಮುಂದುವರಿಸಲು ನಿರ್ಣಯಿಸಲಾಗಿದೆ.
 
 
ಧರಣಿ ಸತ್ಯಾಗ್ರಹವನ್ನು ಚಾಲನೆ ನೀಡಿ ಮಾತನಾಡುತ್ತ ಫಡರೇಶನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡುತ್ತಾ, ಕಾರ್ಮಿಕರ ಸೌಲಭ್ಯ ಅವರಿಗೆ ಸಿಗಬೇಕು. ಇದರಲ್ಲಿ ಯಾರೂ ಆಟ ಆಡಬಾರದು. ಅವರಿಗೆ ನೀಡಿರುವ ಗುರುತುಚೀಟಿಯನ್ನು ಅನರ್ಹಗೊಳಿಸಲು ಕಾರಣವಾದ ಕಾರ್ಮಿಕ ಇಲಾಖೆಯ ನೀತಿಯ ವಿರುದ್ದ ಅವರಿಗೆ ಸದಸ್ಯತ್ವ ಉಳಿಸುವವರೆಗೆ ಹೋರಾಟ ಮುಂದುವರಿಸಲಾಗುವುದು. CITU ಏಕೈಕವಾಗಿ ಹೋರಾಟ ಮಾಡಿ ಕಟ್ಟಡ ಕಾರ್ಮಿಕರ ಕಾನೂನು ಇವತ್ತು ಅನುತ್ಪಾದಕವೆಂದು ಪರಿವರ್ತನೆಯಾಗುವ ಸ್ಥಿತಿಯು ಇಲಾಕೆಯ ನೂನ್ಯತೆಯಿಂದ ಆಗಿರುತ್ತದೆ. ಕಲ್ಯಾಣ ಮಂಡಳಿಯಲ್ಲಿ ಜಮಾ ಆಗಿರುವ ಹಣ ಕಾರ್ಮಿಕರಿಗೆ ವಿತರಣೆ ಆಗಬೇಕು ವಿನಹ: ಅದುದುಂದು ವೆಚ್ಚಗಳಿಗೆ ಆಹಾರ ಆಗಬಾರದು. ಇದಕ್ಕೆ ಅವಕಾಶ ಕೂಡಾ ನೀಡಬಾರದು. ಅನರ್ಹ ಸದಸ್ಯತ್ವ ಎಂದು ಘೋಷಿಸಿ ಕಟ್ಟಡಕಾರ್ಮಿಕರಿಗೆ ಸವಲತ್ತು ನಿರಾಕರಣೆ ಮಾಡಲಾಗಿದೆ. ಈ ಅರ್ಜಿಗಳನ್ನು ಮರುಪರಿಶೀಲನೆಗೊಳಪಡಿಸಬೇಕು. 29-06-2016ರಂದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ದಿನಾಂಕ30-06-2016ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದೆಂದು ಎಚ್ಚರಿಕೆ ನೀಡಿದರು.
 
 
ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ CITU ಜಿಲ್ಲಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿ, ಬಿ.ಎಂ.ಭಟ್ಯು. ಜಯಂತ್ ನಾಯಕ್, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಗಂಗಯ್ಯ ಅಮೀನ್ ರಮಣ್ಣ ವಿಟ್ಲ ಮುಂತಾದವರು ಮಾತನಾಡಿದ್ದರು.
 
 
ಈ ದಿನದ ಧರಣಿ ಸತ್ಯಾಗ್ರಹದ ನೇತೃತ್ವವನ್ನು ಕಟ್ಟಡ ಕಾರ್ಮಿಕ ಮುಂದಾಳುಗಾಳಾದ ಶಂಕರ್ ಮೂಡಬಿದ್ರಿ, ಸೀತರಾಮ ಶೆಟ್ಟಿ, ಸದಾಶಿವದಾಸ್, ವಸಂತಿ, ನೋನಯಗೌಡ, ಜಯಶೀಲ ,ಆಶೋಕ್, ಮನೋಜ್, ಲೋಕೆಶ್, ಪ್ರೇಮನಾಥ, ಸಂತೋಷ್ ಶಕ್ತಿನಗರ ಮುಂತಾದವರು ವಹಿಸಿದ್ದರು. ಸದಾಶಿವದಾಸ್ ಸ್ವಾಗತಿಸಿದರು. ಶಂಕರ್ ಮೂಡಬಿದ್ರಿ ಧನ್ಯವಾದ ನೀಡಿದರು

LEAVE A REPLY

Please enter your comment!
Please enter your name here