ಎಮಿನೆಂಟ್ ಎಜುಕೇಶನಿಸ್ಟ್ ಪ್ರಶಸ್ತಿ

0
378

ನಮ್ಮ ಪ್ರತಿನಿಧಿ ವರದಿ
ಮುನಿಯಾಲು ಆಯುರ್ವೇದ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಡಾ. ಶ್ರೀಪತಿ ಆಚಾರ್ಯ ಇವರು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಹಾಗೂ ವಿಶೇಷವಾದ ಮತ್ತು ಸಮಾಜದಲ್ಲಿ ಒಳ್ಳೆಯ ಬದಲಾವಣೆಯನ್ನು ತರುವ ಶಿಕ್ಷಣವನ್ನು ನೀಡುವವರಿಗೆ ದ ಇಂಡಸ್ ಫೌಂಡೇಶನ್ ಪ್ರದಾನ ಮಾಡುವ ಎಮಿನೆಂಟ್ ಎಜುಕೇಶನಿಸ್ಟ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
 
 
 
ಈ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ಸೆಂಚುರಿ ಪೆವಿಲಿಯನ್ ಹೋಟೆಲಿನಲ್ಲಿ ನಡೆದ ಇಂಡೋ ಆಮೇರಿಕನ್ ಎಜುಕೇಶನ್ ಸಮ್ಮಿಟ್ (Indo-American Education Summit) -2016 ನಲ್ಲಿ ಪ್ರದಾನ ಮಾಡಲಾಯಿತು.
 
 
ಈ ಸಮ್ಮೇಳನದಲ್ಲಿ ಸುಮಾರು 9 ಆಮೇರಿಕ ವಿಶ್ವವಿದ್ಯಾಲಯದ ಅಧೀಕ್ಷಕರು ಹಾಗೂ 50ಕ್ಕೂ ಅಧಿಕ ಭಾರತೀಯ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದರು. ಸಂಸ್ಥೆಯ 8 ಜನ ವಿದ್ಯಾರ್ಥಿಗಳು ಕೂಡಾ ಸಮ್ಮೇಳನದಲ್ಲಿ ಭಾಗವಹಿಸಿ ಬೇರೆ ಬೇರೆ ಆಮೇರಿಕಾದ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಶೈಕ್ಷಣಿಕ ತರಬೇತಿ ಹಾಗೂ ಸಂಶೋಧನಾ ವಿಷಯದ ಬಗ್ಗೆ ಮಾಹಿತಿಯನ್ನು ಪಡೆದರು.

LEAVE A REPLY

Please enter your comment!
Please enter your name here