ಎತ್ತಿನ ಹೊಳೆ ಯೋಜನೆ: ಮಹತ್ವದ ಸಭೆ

0
120

ಬೆಂಗಳೂರು ಪ್ರತಿನಿಧಿ ವರದಿ
ಎತ್ತಿನ ಹೊಳೆ ಯೋಜನೆ ಸಂಬಂಧ ಮಹತ್ವದ ಸಭೆ ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ.
 
 
 
ಸಭೆಯಲ್ಲಿ ಸಚಿವರಾದ ರಮಾನಾಥ್ ರೂ, ಯು ಟಿ ಖಾದರ್, ಪ್ರಮೋದ್ ಮಧ್ವರಾಜ್, ಸಂಸದ ನಳಿನ್ ಕುಮಾರ್, ಶಾಸಕರಾದ ವಸಂತ ಬಂಗೇರಾ, ಕೋಟಾ ಶ್ರೀನಿವಾಸ ಪೂಜಾರಿ, ಶಕುಂತಲಾ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿ ಪರ-ವಿರೋಧ ಹೋರಾಟಗಾರರು ಉಪಸ್ಥಿತರಿದ್ದಾರೆ.
 
 
 
13 ಸಾವಿರ ಕೋಟಿ ರೂ. ವೆಚ್ಚದ ಎತ್ತಿನ ಹೊಳೆ ಯೋಜನೆ ಆರಂಭವಾಗಿದ್ದು, ನೇತ್ರಾವತಿ ನದಿ ನೀರನ್ನು ತುಮಕೂರು, ಕೋಲಾರ ಜಿಲ್ಲೆಗಳಿಗೆ ಪಂಪ್ ಮಾಡುವ ಯೋಜನೆಯಾಗಿದೆ.

LEAVE A REPLY

Please enter your comment!
Please enter your name here