ಎತ್ತಿನ ಹೊಳೆ ಬಗ್ಗೆ ಉಸ್ತುವಾರಿ ಸಚಿವರ ಹೇಳಿಕೆ ಕಳವಳಕಾರಿ : ಜಿತೇಂದ್ರ ಕೊಟ್ಟಾರಿ

0
145

 
ಮಂಗಳೂರು ಪ್ರತಿನಿಧಿ ವರದಿ
ದಕ್ಷಿಣ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಮತ್ತು ಜೀವನದಿ ನೇತ್ರಾವತಿಯನ್ನು ಬರಡು ಮಾಡುವ ಎತ್ತಿನ ಹೊಳೆ ಯೋಜನೆಯ ಬಗ್ಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಸಂಶಯಾಸ್ಪದವಾಗಿದೆ. ಈ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಕವಡೆ ಕಾಸಿನ ಕಿಮ್ಮತ್ತು ಇಲ್ಲದ ರೀತಿಯಲ್ಲಿ ಸಚಿವರಾದ ರಮಾನಾಥ ರೈಯವರು ಹೇಳಿಕೆಯನ್ನು ನೀಡಿರುವುದು ಗಂಭೀರತೆಯನ್ನು ಅರಿತು ಜಿಲ್ಲೆಯ ಜನ ತಕ್ಕ ಉತ್ತರವನ್ನು ನೀಡಬೇಕು. ಈ ಯೋಜನೆಯನ್ನು ಯಾರಿಂದಲೂ ಆಥವಾ ಯಾವುದೇ ಸರಕಾರದಿಂದಲೂ ತಡೆಯಲು ಸಾದ್ಯವಿಲ್ಲ ಮತ್ತು ಈ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ದ ಎಂಬ ಮಾತು ದ.ಕ. ಜಿಲ್ಲೆಯನ್ನು ಎಷ್ಟರ ಮಟ್ಟಿಗೆ ಕಡೆಗಣಿಸುತ್ತಿದ್ದಾರೆ ಎಂಬುದನ್ನು ಜಿಲ್ಲೆಯ ಜನತೆ ತಿಳಿಯಬೇಕಾಗುತ್ತದೆ.
 
 
ಜಿಲ್ಲೆಯ ಒಬ್ಬ ಉಸ್ತುವಾರಿ ಸಚಿವರಾಗಿ ಮತ್ತು ನೇತ್ರಾವತಿಯನ್ನೇ ಆಶ್ರಯಿತರಾಗಿ ಬದುಕುವ ರೈತರೇ ಅಧಿಕ ಸಂಖ್ಯೆಯಲ್ಲಿರುವ ಬಂಟ್ವಾಳದಂತಹ ಕ್ಷೇತ್ರದ ಶಾಸಕರಾಗಿ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಬದಲು, ಇದನ್ನು ಸಮರ್ಥಿಸುವುದು ಎಷ್ಟು ಸರಿ.
 
 
ಮುಖ್ಯ ಮಂತ್ರಿಗಳ ಜೊತೆಗೆ ಡಿಸೆಂಬರ್ 26 ರಂದು ನಡೆದ ಸಭೆಯನ್ನು ಸ್ವತ್ಹ ತಾನೇ ವ್ಯವಸ್ಥೆ ಮಾಡೀದ್ದೇನೆ ಎಂದು ಹೇಳಿರುವ ಸಚಿವರು ಈ ಬಗ್ಗೆ ಯಾವುದೇ ಪರಿಣಾಮಗಳು ದ್ಯೇಯ ಈ ಚರ್ಚೆಯ ಮುಖಾಂತರ ದ.ಕ. ಜಿಲ್ಲೆಗೆ ದೊರೆಯುವುದಿಲ್ಲ ಎಂದು ಮುಂಚಿತವಾಗಿ ತಿಳಿದಿದ್ದರೆ ಯಾವ ಪುರುಷಾರ್ಥಕ್ಕಾಗಿ ಈ ಸಭೆಯನ್ನು ಸಡೆಸುತ್ತಾರೇ? ಮತ್ತು ಕೇವಲ ಕಾಟಾಚಾರಕ್ಕಾಗಿ ಮಾತ್ರ ಮಾಡಿರುವ ಸಭೆಯೇ ಎಂಬುದಾಗಿ ಜಿಲ್ಲೆಯ ಜನರಿಗೆ ತಿಳಿಸುವ ಜವಾಬ್ಡಾರಿಯನ್ನು ಉಸ್ತುವಾರಿ ಸಚಿವರು ಹೊರಾಬೇಕಾಗುತ್ತದೆ.
 
 
ಈ ಯೋಜನೆಯಲ್ಲಿ ಹಿಂದಿನ ಯಾವುದೇ ಸರಕಾರದ ಪಾಲ್ಗೊಳ್ಳುವಿಕೆ ಇದ್ದರೂ ಕೂಡ ಈಗಿನ ಉಸ್ತುವಾರಿ ಸಚಿವರಾಗಿ,ಇತರ ಪಕ್ಶಗಳ ಮೇಲೆ ಗೂಬೆ ಕೂರಿಸುವ ಬದಲು ಜಿಲ್ಲೆಯ ಒಳಿತಿಗೂಸ್ಕರ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸುವಂತಾಗುತ್ತದೆ.
 
ಹೋರಾಟಗಾರರಲ್ಲಿರುವ ತಮ್ಮದೇ ಪಕ್ಷದ ನಾಯಕರೊಂದಿಗಿರುವ ವ್ಯೆಯುಕ್ತಿಕ ದ್ವೇಷ ಸಾಧನೆಗೋಸ್ಕರ ಜಿಲ್ಲೆಯ ಅನ್ಯಾಯ ಮಾಡುವುದು ಎಷ್ಟು ಸರಿ? ಆದ್ದರಿಂದ ಈ ಯೋಜನೆಯ ವಿಚಾರದಲ್ಲಿ ವಿನಾ; ಹೇಳಿಕೆಗಳನ್ನು ನೀಡಿ ಜನರ ಮತ್ತು ಹೋರಾಟಗಾರರ ದಾರಿ ತಪ್ಪಿಸುವುದು ಉಸ್ತುವಾರಿ ಸಚಿವರಾಗಿ ನಿಮಗೆ ಶೋಭೆ ತರುವುಂತಹದಲ್ಲ.
 
 
ರಾಷ್ಟ್ರೀಯ ಹಸಿರು ನ್ಯಾಯಾದಿಕರಣದ ನಿರ್ದೇಶನದಂತೆ ಈಗಾಗಲೇ ಈ ಯೋಜನೆಯ ಪ್ರದೇಶದಲ್ಲಿ ಅರ್ಜಿದಾರರು, ಕೇಂದ್ರ ಅರಣ್ಯ ಸಚಿವಾಲಯದ ಪ್ರಾದೇಶಿಕ ಕಛೇರಿಯ ಉನ್ನತಾದಿಕಾರಿಗಳು ಮತ್ತು ಕರ್ನಾಟಕ ನೀರಾವರಿ ನಿಗಮದ ಅದಿಕಾರಿಗಳು ಜಂಟಿ ಪರಿಶೀಲನೆಯನ್ನು ನಡೆಸುತ್ತಿರುವುದು, ಹೋರಾಟಗಾರರ ಕಾನೂನಾತ್ಮಕ ಹೋರಾಟಕ್ಕೆ ಸಿಕ್ಕಿರುವ ನ್ಯಾಯವಾಗಿದೆ. ಆದ್ದರಿಂದ ಈ ಯೋಜನೆಯ ವಿರುದ್ದ ಕಾನೂನಿನ ಜಯ ಖಂಡಿತ ಜಿಲ್ಲೆಯ ಜನರಿಗೆ ದೊರೆಯುತ್ತದೆ ಎಂಬ ಆಶಾ ಬಾವನೆಯನ್ನು ಹೊಂದಿರುತ್ತಾರೆ.
 
ಆದ್ದರಿಂದ ಈ ಯೋಜನೆಗೆ ನಕಾರಾತ್ಮಕವಾಗಿ ಹೇಳಿಕೆಯನ್ನು ಕೊಡುವ ಬದಲು ಜಿಲ್ಲೆಯ ಉಸ್ತುವಾರಿ ಸಚಿವರು, ಸಕಾರಾತ್ಮಕವಾಗಿ ಸ್ಪಂದಿಸಿ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುತ್ತೇವೆ ಎಂಬ ಜಿಲ್ಲೆಯ ಜನರ ಕೂಗಿಗೆ ದ್ವನಿಯಾಗಬೇಕೆಂದು ಬಾ.ಜ.ಪ ಪಕ್ಷದ ವಕ್ತಾರ ಜಿತೇಂದ್ರ ಎಸ್ ಕೊಟ್ಟಾರಿ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here