ಎಡಪ್ಪಾಡಿ ಪಳನಿಸ್ವಾಮಿ ಮುಂದಿನ ಸಿಎಂ

0
305

ಚೆನ್ನೈ ಪ್ರತಿನಿಧಿ ವರದಿ
ಮತ್ತೆ ಸಿಎಂ ಆಗಬೇಕೆಂಬ ಓ.ಪನ್ನೀರ್ ಸೆಲ್ವಂ ಕನಸು ಭಗ್ನವಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಗವರ್ನರ್ ವಿದ್ಯಾಸಾಗರ ರಾವ್ ಅವರು ಮಹತ್ವದ ತೀರ್ಮಾನ ಮಾಡಿದ್ದಾರೆ.
 
 
ವಿ.ಕೆ ಶಶಿಕಲಾ ಬಂಟ ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿಗೆ ಸರ್ಕಾರ ರಚನೆಗೆ ರಾಜಪಾಲರು ಆಹ್ವಾನ ನೀಡಲಾಗಿದೆ. ಪಳನಿಸ್ವಾಮಿ ತಮಿಳುನಾಡಿನ ನೂತನ ಸಿಎಂ ಆಗಿ ಇಂದು ಸಂಜೆ 4.30ಕ್ಕೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಮಿಳುನಾಡಿನ ರಾಜಭವನ ಉನ್ನತ ಮೂಲಗಳು ಮಾಹಿತಿ ನೀಡಿದೆ.
 
 
 
ಅಲ್ಲದೆ ಎಡಪ್ಪಾಡಿ ಪಳನಿಸ್ವಾಮಿ 124 ಶಾಸಕರ ಬೆಂಬಲವಿದೆ ಎಂದು ಘೋಷಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ 118 ಮ್ಯಾಜಿಲ್ ನಂಬರ್ ಬೇಕು. ಹೀಗಾಗಿ ಬಹುಮತ ಸಾಬೀತಿಗೆ ತಮಿಳುನಾಡಿನ ಉಸ್ತುವಾರಿ ರಾಜಪಾಲ ವಿದ್ಯಾಸಾಗರ್ ರಾವ್ ಸೂಚಿಸಿದ್ದರು. ಹೀಗಾಗಿ ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬೀಳುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here