ಎಟಿಎಂ ವಿತ್ ಡ್ರಾ ಮಿತಿ ಏರಿಕೆ

0
271

ರಾಷ್ಟ್ರೀಯ ಪ್ರತಿನಿಧಿ ವರದಿ
ದಿನದ ಎಟಿಎಂ ವಿತ್ ಡ್ರಾ ಮಿತಿಯನ್ನು 4,500 ರೂ.ನಿಂದ 10,000 ರೂ.ಗೆ ಏರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ವಾರದ ಬ್ಯಾಂಕ್ ವಿತ್ ಡ್ರಾ ಮಿತಿ 24 ಸಾವಿರದಲ್ಲೇ ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
 
 
 
ಇನ್ನೂ, ಕರೇಂಟ್ ಅಕೌಂಟ್ ಹೊಂದಿರುವವರ ವಾರದ ಎಟಿಎಂ ವಿತ್ ಡ್ರಾ ಮಿತಿಯನ್ನ 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಏರಿಸಲಾಗಿದೆ. ನೋಟ್ ಬ್ಯಾನ್ ಮಾಡಿದ ಬಳಿಕ, ಮೊದಲಿಗೆ 2000 ರೂ. ಬಳಿಕ 2500 ರೂ. ನಂತರದಲ್ಲಿ 4500 ರೂ.ಗೆ ಏರಿಕೆ ಮಾಡಲಾಗಿತ್ತು. ಈಗ ದಿನಕ್ಕೆ 10,000 ರೂ. ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿ ಕರೆಂಟ್ ಅಕೌಂಟ್ ನಿಂದಲೂ ಹಣ ಪಡೆಯುವ ಮಿತಿಯನ್ನು ಏರಿಕೆ ಮಾಡಲಾಗಿದ್ದು, 50,000 ರೂ. ನಿಂದ 1,00,000 ರೂ.ಗೆ ಏರಿಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here