ಎಕೆಪಿಎ ಗುರುತುಚೀಟಿ ವಿತರಣೆ

0
401

 
ವರದಿ- ಚಿತ್ರ: ಶ್ಯಾಮ್ ಪ್ರಸಾದ್, ಬಡಿಯಡ್ಕ
ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ 2016-17ನೇ ಸಾಲಿನ ಗುರುತು ಚೀಟಿ ವಿತರಣೆ ಕಾರ್ಯಕ್ರಮವು ನೀರ್ಚಾಲು ಶಾರ್ಪ್ ಸ್ಟುಡಿಯೋದಲ್ಲಿ ಮಂಗಳವಾರ ನಡೆಯಿತು.
 
 
 
ಬದಿಯಡ್ಕ ಯೂನಿಟ್ ಅಧ್ಯಕ್ಷ ಉದಯ ಕುಮಾರ್ ಮೈಕುರಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸದಸ್ಯ ಗಣೇಶ್ ಪೆರ್ಲ ಅವರು ನೂತನ ಸದಸ್ಯ ಇಮ್ತಿಯಾಸ್ ಪೆರ್ಲ ಅವರಿಗೆ ಗುರುತುಚೀಟಿಯನ್ನು ನೀಡುವ ಮೂಲಕ ಉದ್ಘಾಟಿಸಿದರು.
 
 
 
ಕಾರ್ಯದರ್ಶಿ ವೇಣುಗೋಪಾಲ ಅವರು ಚುನಾವಣಾ ಸಂದರ್ಭದಲ್ಲಿ ವೀಡಿಯೋಗ್ರಾಫಿಗೆ ಸಹಕರಿಸಿದ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿ ಸಂಘಟನೆಯನ್ನು ಬಲಪಡಿಸಲು ನಾವೆಲ್ಲ ಒಗ್ಗಟ್ಟಿನಿಂದ ಮುಂದುವರಿಯಬೇಕು ಎಂದರು.
 
 
 
ವಿನು ಪೆರ್ಲ ಸ್ವಾಗತಿಸಿದರು. ಅಪ್ಪಣ್ಣ ಸೀತಂಗೋಳಿ ಧನ್ಯವಾದವನ್ನಿತ್ತರು. ಛಾಯಾಗ್ರಾಹಕರಾದ ಶ್ಯಾಮಪ್ರಸಾದ ಸರಳಿ, ಗೋಪಾಲಕೃಷ್ಣ ಅಡ್ಯನಡ್ಕ, ಕೃಷ್ಣ, ಹರ್ಷ ಕೀರಿಕ್ಕಾಡು, ನವೀನ್, ಗೋಪಾಲಕೃಷ್ಣ, ಮಹೇಶ್ ಕೃಷ್ಣ ತೇಜಸ್ವಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here