ಎಂ.ಕೃಷ್ಣಪ್ಪಗೆ ಸಚಿವಗಿರಿ

0
448

ಬೆಂಗಳೂರು ಪ್ರತಿನಿಧಿ ವರದಿ
ಗಣೇಶ ಚೌತಿ ಹಬ್ಬದಂದೇ ರಾಜ್ಯ ಸಚಿವ ಸಂಪುಟ ಸರ್ಜರಿಯಾಗಲಿದೆ. ಹೌದು ಕೊನೆಗೂ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ.
 
 
ಈ ಹಿನ್ನೆಲೆಯಲ್ಲಿ ನಾಳೆ ಸಂಜೆ 4ಗಂಟೆ ರಾಜಭವನದಲ್ಲಿ ನೂತನ ಸಚಿವರ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಲಿದೆ. ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪಗೆ ಸಚಿವ ಸ್ಥಾನ ಲಭಿಸಿದೆ. ಎಂ.ಕೃಷ್ಣಪ್ಪಗೆ ವಸತಿ ಖಾತೆ ದೊರೆಯಲಿದೆ. ಸಚಿವರಾದ ವಿನಯ್ ಕುಲಕರ್ಣಿ, ಪಂಶುಸಂಗೋಪನೆ ಸಚಿವ ಎ.ಮಂಜುಗೆ ರಾಜ್ಯ ಸಚಿವ ಸ್ಥಾನಮಾನದಿಂದ ಕ್ಯಾಬಿನೆಟ್ ದರ್ಜೆಗೆ ಬಡ್ತಿ ಸಿಗಲಿದೆ. ಇವರೆಲ್ಲಾ ನಾಳೆ ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.
 
 
ಎರಡು ಸ್ಥಾನ ಖಾಲಿ ಇತ್ತು. ಅದರಲ್ಲಿ ಒಂದು ಸ್ಥಾನ ಜಾರ್ಜ್ ಆವರದ್ದಾಗಿತ್ತು. ಈಗ ಉಳಿದ ಇನ್ನೊಂದು ಸ್ಥಾನವನ್ನು ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪಗೆ ನೀಡಲಾಗಿದೆ.

LEAVE A REPLY

Please enter your comment!
Please enter your name here