ಎಂ.ಎಸ್.ರಾಮಯ್ಯ ಆಸ್ಪತ್ರೆಯ ವಿರುದ್ಧ ಆರೋಪ

0
612

ಬೆಂಗಳೂರು ಪ್ರತಿನಿಧಿ ವರದಿ
ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ದಾಖಲಾಗಿದೆ. HIV ಸೋಂಕು ಪೀಡಿತ ರಕ್ತಪೂರೈಕೆ ಮಾಡಿದ್ದ ಆರೋಪ ಬಂದಿದೆ.
 
 
ಇದರಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಅಡಳಿತಾಧಿಕಾರಿ ಸೇರಿ 14 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸದಾಶಿವನಗರ ಠಾಣೆಯಲ್ಲಿ ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿನ ರಾಮಯ್ಯ ಆಸ್ಪತ್ರೆ ವಿರುದ್ಧ ದೂರು ದಾಖಲಾಗಿದೆ.
 
 
 
ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆ ನೀಡಿದ ರಕ್ತದಿಂದ HIV ಸೋಂಕು ತಗುಲಿದೆ. 2014ರ ಫೆಬ್ರವರಿಯಲ್ಲಿ ಚಿಕಿತ್ಸೆಗೆಂದು ಮಹಿಳೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಎಂ.ಎಸ್.ರಾಮಯ್ಯ ಆಸ್ಪತ್ರೆ ಸಿಬ್ಬಂದಿಗಳು ಮಹಿಳೆಗೆ ರಕ್ತ ನೀಡಿದ್ದರು.
 
 
 
ಸಂತ್ರಸ್ತೆಯ ಸೋದರನಿಂದ ನ್ಯಾಯಾಲಯಕ್ಕೆ ಖಾಸಗಿ ದೂರು ಹೋಗಿದೆ. ಬೆಂಗಳೂರಿನ 7ನೇ ಎಸಿಎಂಎಂ ಕೋರ್ಟ್ ದೂರು ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿ ತನಿಖೆಗೆ ಸೂಚನೆ ನೀಡಿತ್ತು. ಅಲ್ಲದೆ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ದೂರು ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. ಸದ್ಯ ಸದಾಶಿವನಗರ ಠಾಣೆ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಸೆಕ್ಷನ್ 120(B), 320, 324, 336, 338ರ ಅಡಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here