ಎಂಬಿಎಯಿಂದ ಉಜ್ವಲ ಭವಿಷ್ಯ ಯಾಕೆ? ಹೇಗೆ?

0
445

 
ವಿಶಿಷ್ಠ ಪ್ರೋಗ್ರಾಂ ಆಗಿರುವ ಎಂಬಿಎ, ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ವೃತ್ತಿಪರರನ್ನಾಗಿ ಬದಲಾಯಿಸುವುದರ ಜೊತೆಗೆ ಉತ್ತಮ ಪ್ರಜೆಯಾಗಿ ರೂಪಿಸುತ್ತದೆ. ಹಿಂದಿನ ಸಾಲಿನ ವಿದ್ಯಾರ್ಥಿಗಳನ್ನೂ ದೊಡ್ಡ ಉದ್ಯಮ ನಾಯಕರನ್ನಾಗಿ ಬದಲಾಯಿಸುವ ಸಾಮರ್ಥ್ಯ ಈ ಕೋರ್ಸ್ ಗೆ ಇದೆ. ಈ ಪ್ರೋಗ್ರಾಂನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳು ಉನ್ನತ ಉದ್ಯೋಗವನ್ನು ಪಡೆಯುತ್ತಾರೆ.
 
 
 
ವಿದ್ಯಾರ್ಥಿಯೊಬ್ಬನ ಜೀವನದ ಗತಿಯನ್ನೇ ಬದಲಾಯಿಸುವ ಮ್ಯಾನೇಜ್ ಮೆಂಟ್ ಪ್ರೋಗ್ರಾಂ, ವಿದ್ಯಾರ್ಥಿಗಳ ಕನಸಿನ ಉದ್ಯೋಗ ಭವಿಷ್ಯವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ. ನಾನಾ ವಿಭಾಗಗಳ ಎಲ್ಲಾ ರೀತಿಯ ಮೂಲಭೂತ ಅಂಶಗಳನ್ನು ಪಡೆದು ಈಗಿರುವ ಜ್ಞಾನದ ಜೊತೆಗೆ ಅವುಗಳನ್ನೂ ಸೇರಿಸುವ ಕಾರಣದಿಂದಲೇ ಎಂಬಿಎಗೆ ಅಷ್ಟು ಬೇಡಿಕೆಯಿದೆ. ಈ ಮೂಲಕ ವಿದ್ಯಾರ್ಥಿಗಳ ಜೀವನಕ್ಕೆ ಹೊಸ ರೂಪ ನೀಡುವ ಅನನ್ಯ ವಿಭಾಗ ಇದಾಗುವಂತೆ ಮಾಡಿದೆ.
 
 
 
ಗೀತಂ ವಿಶ್ವವಿದ್ಯಾಲಯದ ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿರುವ ಎಂಬಿಎ ಕೋರ್ಸ್ ನ್ನು ವಿದ್ಯಾರ್ಥಿಗಳಲ್ಲಿ ಆಸಕ್ತಿ, ಉತ್ಸಾಹ ಮೂಡಿಸುವ ರೀತಿಯಲ್ಲಿ ವಿನ್ಯಾಸ ಗೊಳಿಸಲಾಗಿದೆ. ಎರಡು ವರ್ಷಗಳ ಈ ಕೋರ್ಸ್ ನ ಪ್ರತಿ ಹಂತದಲ್ಲೂ ಉದ್ಯಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕೌಶಲ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಆ ವಿಭಾಗದಲ್ಲೇ ಅವರು ಸ್ಪೆಶಲೈಸೇಶನ್ ಪಡೆಯಲು ನೆರವಾಗುತ್ತದೆ.
 
 
 
ಇತರ ಎಂಬಿಎ ಪ್ರೋಗ್ರಾಂಗಳಿಗಿಂತ ಗೀತಂ ಎಂಬಿಎ ಡಿಗ್ರಿ ವಿಭಿನ್ನವಾಗಿದೆ. ಯಾಕೆಂದರೆ ಇಲ್ಲಿ ಬ್ಯುಸಿನೆಸ್ ಸಿಮ್ಯುಲೇಶನ್ ಗೇಮ್ಸ್, ಕಾಫಿ ವಿತ್ ಸಿಇಒ, ಕೇಂಬ್ರಿಡ್ಜ್ ವಿವಿಯ ಬಿಇಸಿ ತರಬೇತಿ, ವಿಸ್ಡಂ ಸ್ಟೂಡೆಂಟ್ ಕ್ಲಬ್, ಸ್ಪೆಶಿಯಲ್ ಲೀಡರ್ಶಿಪ್ ಡೆವಲಪ್ ಮೆಂಟ್ ಪ್ರೋಗ್ರಾಂ, ಎಂಪ್ಲಾಯೇಬಿಲಿಟಿ ಎನ್ಹ್ಯಾನ್ಸ್ಮೆಂಟ್ ಪ್ರೋಗ್ರಾಂ ಮೊದಲಾದ ವಿಶೇಷ ಅಂಶಗಳ ಮೂಲಕ ಇದು ಇತರ ಎಂಬಿಎ ಗಿಂತ ವಿಭಿನ್ನವಾಗಿದೆ. ಉದ್ಯಮ ಕ್ಷೇತ್ರದಲ್ಲಿ ವಾಸ್ತವ ನೆಲೆಗಟ್ಟಿನಲ್ಲಿ ಎದುರಾಗುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಾರೆ. ಪಠ್ಯೇತರ ಚಟುವಟಿಕೆ, ಉದ್ಯಮ ಕಂಪನಿಗಳಿಗೆ ಭೇಟಿ, ಉದ್ಯಮ ಕ್ಷೇತ್ರದ ತಜ್ಞರ ಜೊತೆ ಸಂವಾದ, ಅಸೈನ್ ಮೆಂಟ್ ಮತ್ತು ಪ್ರಾಜೆಕ್ಟ್ ಗಳು ಕೂಡ ಇಲ್ಲಿರುತ್ತವೆ. ಎಂಬಿಎ ಪ್ರೋಗ್ರಾಂ ವಿದ್ಯಾರ್ಥಿಗಳನ್ನು ವಿಶ್ವ ಮಾರುಕಟ್ಟೆ, ಜಾಗತಿಕ ಮತ್ತು ರಾಷ್ಟ್ರೀಯ ಉದ್ಯಮ ಕ್ಷೇತ್ರಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ.
 
ಈ ಪ್ರೋಗ್ರಾಂ ವಿದ್ಯಾರ್ಥಿಗಳಲ್ಲಿ ದೊಡ್ಡ ಕನಸು ಕಾಣಲು ಮತ್ತು ಸೀಮಾತೀತವಾಗಿ ವಿದೇಶಗಳಲ್ಲಿ ಉದ್ಯೋಗ ಪಡೆಯಲು ಆತ್ಮವಿಶ್ವಾಸ ಮೂಡಿಸುತ್ತದೆ. ಸಂವಹನ, ಏಕತಾನತೆ ಚಿಂತನೆಯಿಂದ ಹೊರಗೆ ಬರುವ ಸಾಮರ್ಥ್ಯ, ಜ್ಞಾನ ಭಂಡಾರ, ಸ್ವಯಂ ಪ್ರೇರಣೆ, ಇನ್ನೊಬ್ಬರ ಮನವೊಲಿಸುವಿಕೆ ಸೇರಿದಂತೆ ಹಲವು ವಿಧದ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಇದು ತುಂಬುತ್ತದೆ.
 
 
 
ಅ ಪ್ರೋಗ್ರಾಂ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಯೋಚನೆ ಮಾಡುವ ಸಾಮರ್ಥ್ಯವನ್ನು ಉತ್ತೇಜಿಸಿ ಈ ಮೂಲಕ ದೊಡ್ಡ ನಾಯಕರನ್ನು ಮತ್ತು ಉದ್ಯಮಿಗಳಾಗಲು ಪ್ರೇರೇಪಿಸುತ್ತದೆ. ವಿನೀತವವನ್ನು ಬಿಟ್ಟುಕೊಡದೆ ವಿದ್ಯಾರ್ಥಿಗಳು ದೊಡ್ಡ ಕನಸು ಕಂಡು ಅದನ್ನು ಈಡೇರಿಸಿಕೊಳ್ಳಲು ಈ ಕೋರ್ಸ್ ನಿಂದ ಸಾಧ್ಯವಾಗುತ್ತದೆ. ಫ್ರೆಂಚ್, ಸ್ಪಾನಿಶ್ ಮತ್ತು ಜರ್ಮನಿಯಂತಹ ವಿದೇಶಿ `ಭಾಷೆಗಳನ್ನು ಕಲಿತುಕೊಂಡು ಅಂತಾರಾಷ್ಟ್ರೀಯ ಮಟ್ಟದ ಸವಾಲುಗಳನ್ನು ಎದುರಿಸಲು ಇದು ವಿದ್ಯಾರ್ಥಿಗಳಿಗೆ ನೆರವು ನೀಡುತ್ತದೆ.
ಎಂಬಿಎ ಪದವೀದರರು ಹೆಚ್ಚು ಸಂಯಮದಿಂದ ಕಲಿಯುವಂತೆ, ಸಮಯದ ಮಹತ್ವ ತಿಳಿಯುವಂತೆ ಈ ಮೂಲಕ ತಮ್ಮ ಗುರಿಯನ್ನು ತಲುಪುವಂತೆ ಗೀತಂ ವಿವಿ ಮಾಡುತ್ತದೆ. ಇವುಗಳಿಗಿಂತ ಮಿಗಿಲಾಗಿ ವಿದ್ಯಾರ್ಥಿಯೊಬ್ಬನನ್ನು ಅತ್ಯುತ್ತಮ ಮತ್ತು ಯಶಸ್ವಿ ಮಾನವನಾಗುವಂತೆ ಈ ಮೂಲಕ ಉತ್ತಮ ಜೀವನ ನಡೆಸುವಂತೆ ಗೀತಂ ವಿವಿಯ ಎಂಬಿಎ ಕೋರ್ಸ್ ಮಾಡುತ್ತದೆ.
 
ಡಾ. ಪಿ. ಅನಿತಾ ಕುಮಾರಿ, ಗೀತಂ ವಿವಿ ಬೆಂಗಳೂರು ಕ್ಯಾಂಪಸ್

LEAVE A REPLY

Please enter your comment!
Please enter your name here