ಅಂಕಣಗಳುಪ್ರಮುಖ ಸುದ್ದಿವಾರ್ತೆ

ಎಂದೂ ಮುಗಿಯದ ಕಥೆ…

ದೃಷ್ಠಿ ಅಂಕಣ : ಸೌಮ್ಯ ಕುಗ್ವೆ
” ಅಬ್ಬಾಬ್ಬಾ ಎಂತೆಥಾ ಧಾರವಾಹಿಗಳು… ಒಬ್ಬರಿಗಿಂತ ಒಬ್ಬರಿಗೆ ಮನೆಹಾಳು ಮಾಡವುದರಲ್ಲಿ ಸೂಪರ್ ಐಡಿಯಾಗಳು…
* ನಿಮ್ಮ ಮಗನ ಸಂಸಾರ ಹಾಳು ಮಾಡಬೇಕಾದಲ್ಲಿ ಕಲರ್ಸ್ ಕನ್ನಡದಲ್ಲಿ ” ಯಶೋಧೆ ” ಧಾರವಾಹಿ ನೋಡಿ
* ನಿಮ್ಮ ಅಕ್ಕ- ತಂಗಿಯ ಸಂಸಾರ ಹಾಳು ಮಾಡಬೇಕಾದಲ್ಲಿ ಕಲರ್ಸ್ ಕನ್ನಡದಲ್ಲಿ
” ಅಕ್ಕ ” ಧಾರವಾಹಿ ನೋಡಿ
* ನಿಮ್ಮ ದತ್ತು ಮಗಳ ಸಂಸಾರ ಹಾಳು ಮಾಡಬೇಕಾದಲ್ಲಿ ಸುವರ್ಣದಲ್ಲಿ
” ಅಮೃತವರ್ಷಿಣಿ ” ಧಾರವಾಹಿ ನೋಡಿ
* ನಿಮ್ಮ ಸೊಸೆಯನ್ನು ಮನೆ ಬಿಟ್ಟು ಓಡಿಸಬೇಕಾದಲ್ಲಿ ಜೀ ಕನ್ನಡದಲ್ಲಿ ” ಮಿ.ರಂಗೇಗೌಡ ”
ಧಾರವಾಹಿ ನೋಡಿ.
* ನಿಮ್ಮ ಸ್ನೇಹಿತನ ಸಂಸಾರ ಹಾಳು ಮಾಡಬೇಕಾದಲ್ಲಿ ಸುವರ್ಣದಲ್ಲಿ ” ಅವನು ಅತ್ತೆ ಶ್ರಾವಣಿ ” ಧಾರವಾಹಿ ನೋಡಿ.
* ನೀವು ಯಾರದಾದರೂ ಜೀವ ತೆಗೆಯ ಬೇಕಾದಲ್ಲಿ ಕಲರ್ಸ್ ಕನ್ನಡದಲ್ಲಿ
” ಲಕ್ಷ್ಮೀಬಾರಮ್ಮ ” ಧಾರವಾಹಿ ನೋಡಿ
* ನೀವು ಬಾಲ್ಯದಲ್ಲೊಂದು, 25ನೇ ವರ್ಷದಲ್ಲಿ ಇನ್ನೊಮ್ಮೆ ಮದುವೆಯಾಗಬೇಕೆಂದರೆ ಕಲರ್ಸ್ ಕನ್ನಡದಲ್ಲಿ ” ಪುಟ್ಟಗೌರಿ ಮದುವೆ” ಧಾರವಾಹಿ ನೋಡಿ.
 
sirial drusti ankana vaarte
 
ಇದು ಕಳೆದ ಕೆಲವೊಂದು ದಿನದಿಂದ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವ ಸಂದೇಶ. ದಿನೇ ದಿನೇ ಹೆಚ್ಚುತ್ತಿರುವ ಮನರಂಜನಾ ಚಾನೆಲ್ ಗಳ ಪ್ರಮುಖ ಆಕರ್ಷಣೆ ಅವು ಪ್ರಸಾರ ಮಾಡುತ್ತಿರುವ ಧಾರವಾಹಿಗಳಿಂದ‌. ಹೆಚ್ಚಿನವು ಮಧ್ಯಮ ವರ್ಗ ಕೇಂದ್ರೀಕೃತ ಮಹಿಳಾ ಪ್ರಧಾನ ಧಾರವಾಹಿಗಳು.
 
 
ಅತಿ ಹೆಚ್ಚು ಜನರು ತಮ್ಮ ಬಿಡುವಿನ ಸಮಯವನ್ನು ವ್ಯಯಿಸುತ್ತಿರುವುದು ಮನರಂಜನಾ ಚಾನೆಲ್ ಗಳಲ್ಲಿ. ಧಾರವಾಹಿಗಳು ಸಹ ನಿರಂತರವಾಗಿ ಜನರಿಂದ ವೀಕ್ಷಿಸಲ್ಪಡುತ್ತಿರುವ ಕಾರ್ಯಕ್ರಮ ಗಳಲ್ಲಿ ಒಂದು ಎಂದರೆ ತಪ್ಪಲ್ಲ.
 
 
ಪ್ರತಿ ಧಾರವಾಹಿ ಪ್ರಸಾರ ಮಾಡುವಾಗಲೂ ಅವುಗಳ ನಿರ್ದೇಶಕರು ಹೇಳುವ ಪ್ರಕಾರ ಆ ಧಾರವಾಹಿಗಳು ಸಾಮಾಜಿಕ ಕಳಕಳಿ ಹೊಂದಿರುವಂತದ್ದೆಂದು. ಆದರೆ ಶುರುವಿನಲ್ಲಿ ಎಲ್ಲಕ್ಕಿಂತ ಉತ್ತಮ ಎಂದು ಎನ್ನಿಸಿಕೊಳ್ಳುವ ಬಹುತೇಕ ಧಾರವಾಹಿಗಳು ದಿನಗಳೆದಂತೆ ಅವುಗಳ ಹೇಳಿಕೆಗಳಲ್ಲಿನ ಉದ್ದೇಶ ಮರೆತು ಟಿ ಆರ್ ಪಿ ಯ ಹಿಂದೋಡುತ್ತಿರುವುದಂತೂ ನಗ್ನ ಸತ್ಯ.
 
 
ಪ್ರತಿಯೊಂದು ಧಾರವಾಹಿಯೂ ವೀಕ್ಷಕರ ಅಭಿರುಚಿಗೆ, ಇಚ್ಛೆಯ ಅನುಗುಣವಾಗಿ ಎಂದು ಹೇಳಿಕೊಳ್ಳುತ್ತಾ ಪ್ರತಿದಿನದ ನಿಗದಿತ ಸಮಯದ ಕೊನೆಯಲ್ಲಿ ಕುತೂಹಲದ ಒಂದಂಶ ಉಳಿಸುತ್ತಾ ಮರುದಿನದ ಭಾಗದ ತುಣುಕುಗಳನ್ನು ತೋರಿಸಿ ಮುಂದೇನು…? ಎಂಬುದನ್ನು ಶೇಕಡಾ ೯೯ ಇಂದೇ ತಿಳಿಸಿಯಾಗಿರುತ್ತದೆ. ಮರುದಿನವೂ ಹಿಂದಿನ ದಿನ ಪ್ರಸಾರವಾದ ಕೆಲವು ತುಣುಕುಗಳನ್ನು ತೋರಿಸಿ ನಿಗದಿತ ಸಮಯದ ಬಹುಭಾಗ ವನ್ನು ಅನಗತ್ಯ ವ್ಯಯಿಸುವುದರಲ್ಲಿರುತ್ತಾರೆ. ಒಟ್ಟಿನಲ್ಲಿ ಚ್ಯೂಯಿಂಗಮ್ ನಂತೆ ಎಳೆಯಲ್ಪಡುವ ಕಥೆಯು ತಮ್ಮ ನಿಜವಾದ ಕಥಾಹಂದರ ಬಿಟ್ಟು ಎಲ್ಲೆಲ್ಲೋ ಎಳೆದಾಡಲ್ಪಟ್ಟು ಹಲವು ಸಾವಿರ ಕಂತುಗಳನ್ನು ದಾಟಲ್ಪಡುತ್ತದೆ. ಅದೇ ಒಂದು ದೊಡ್ಡ ಹೆಗ್ಗಳಿಕೆಯಾಗಿ ಮುಂದಿನ ಪ್ರತಿ ನಿರ್ದೇಶಕ / ನಿರ್ಮಾಪಕ ರಿಗೂ ಮಾದರಿಯಾಗುವುದು ವಿಪರ್ಯಾಸ.
 
 
 
ಧಾರವಾಹಿಯ ಪಾತ್ರಧಾರಿಗಳು ಹಲವು ಬಾರಿ ಬದಲಾಯಿಸಲ್ಪಟ್ಟು ನಿರಂತರವಾಗಿ ವೀಕ್ಷಿಸುವವರಿಗೂ ಸಹ ಗೊಂದಲ ಉಂಟುಮಾಡುತ್ತದೆ. ಕಿರುತೆರೆ ಯಾ ಬೆಳ್ಳಿತೆರೆಯ ಯಾವುದೇ ಪಾತ್ರಧಾರಿಗಳು ಇರಬಹುದು. ಅವರಿಗೆ ಸಾಕಷ್ಟು ಸಾಮಾಜಿಕ ಐಡೆಂಟಿಟಿ ಅವರ ಪಾತ್ರಗಳಿಂದ ದೊರಕುತ್ತದೆ. ಅಂತಹ ಸಂದರ್ಭದಲ್ಲಿ ಈ ಪಾತ್ರಧಾರಿಗಳ ಸಾಮಾಜಿಕ ಹೊಣೆಗಾರಿಕೆ ಸಹ ಹೆಚ್ಚಿರುತ್ತದೆ. ಹಲವು ಸಾಮಾಜಿಕ ಕಳಕಳಿ ಉಳ್ಳ ಧಾರವಾಹಿಯ ನಟ ನಟಿಯರ ವರ್ತನೆಗಳು ಬೇಜವಾಬ್ದಾರಿಯುತವಾಗಿರುವುದು ದುರಂತವೇ ಸರಿ .ಇಲ್ಲೊಂದು ಉದಾಹರಣೆಯಿದೆ ನೋಡಿ… ‘ಪುಟ್ಟಗೌರಿ ಮದುವೆ’ಯ ನಾಯಕ ನಟ ಕುಡಿದು ವಾಹನ ಚಲಾಯಿಸಿ ಸಿಕ್ಕಿ ಹಾಕಿಕೊಂಡು ಪೇಚಿಗೆ ಸಿಲುಕಿದ್ದು ಇನ್ನೂ ಮರೆಮಾಸಿಲ್ಲ…
 
 
 
ಇವೆಲ್ಲವನ್ನೂ ಮೀರಿ ಈ ಧಾರವಾಹಿಗಳು ಜನರನ್ನು ಆಕರ್ಷಿಸಿರುವುದಂತೂ ಸತ್ಯ. ಕೆಲವು ವ್ಯತಿರಿಕ್ತ ಪರಿಣಾಮ ಬಿಟ್ಟರೆ ಧಾರವಾಹಿಗಳು ದೈನಂದಿನ ಜೀವನದ ಆಗುಹೋಗುಗಳನ್ನೇ ಬಿಂಬಿಸುತ್ತದೆ. ಹಾಗೆಯೇ ಧಾರವಾಹಿಗಳು ದೈನಂದಿನ ಜೀವನದ ಘಟನೆ ಗಳನ್ನೂ ತೋರಿಸುವುದರಿಂದ ಸೂಕ್ಷ್ಮಗ್ರಾಹಿ ,ಸಂವೇದನಾಶೀಲ ವೀಕ್ಷಕರ ಮೇಲೆ ನೇರ ಪರಿಣಾಮ ಬೀರುತ್ತದೆ. ಅತ್ತೆ-ಸೊಸೆಯ ಕಲಹಗಳು,ಮನೆ-ಮನ ಒಡೆಯುವ ಹಲವು ದೃಶ್ಯಗಳು ಹಾಗೂ ಸಂಭಾಷಣೆ ಗಳು ಕೆಲವೇ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದರೆ ಬಹಳಷ್ಟು ವೀಕ್ಷಕರ ಮನಸ್ಸಲ್ಲಿ ಋಣಾತ್ಮಕ ಪರಿಣಾಮ ಉಂಟುಮಾಡುತ್ತದೆ.
ಅತೀ ಆಡಂಬರದ ಪ್ರದರ್ಶನ, ಕೆಲವು ಖಳ ಪಾತ್ರಗಳ ಅತಿ ಬಿಂಬಿಸುವಿಕೆ ಬಿಟ್ಟರೆ ಧಾರವಾಹಿಗಳು ನಿಜವಾಗಿಯೂ ಉತ್ತಮ ಮನೋರಂಜನಾ ವ್ಯವಸ್ಥೆ ಯಾಗುವುದು ಸತ್ಯ.
ಸೌಮ್ಯ ಕುಗ್ವೆ
[email protected]

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here