ಎಂಟಿಸಿಆರ್ ಗೆ ಭಾರತ ಸೇರ್ಪಡೆ

0
383

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಕೊನೆಗೂ ಭಾರತದ ಹತ್ತು ವರುಷಗಳ ಕನಸ್ಸು ನನಸಾಗಿದೆ. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್) ಗೆ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ ಭಾರತ ಇನ್ನು ವಿಶ್ವದ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಅರ್ಹತೆ ಪಡೆದಿದೆ.
 
 
 
ಎಂಟಿಸಿಆರ್‌ಗೆ ಭಾರತವನ್ನು ಸೇರ್ಪಡೆ ಮಾಡುವ ಕುರಿತು ವಿರೋಧಗಳಿದ್ದರೆ ಆ ಕುರಿತು ಅಭಿಪ್ರಾಯ ಸಲ್ಲಿಸಲು ಒಕ್ಕೂಟದ 34 ಸದಸ್ಯ ರಾಷ್ಟ್ರಗಳಿಗೆ ನೀಡಿದ್ದ ಗಡುವು ಸೋಮವಾರ ಅಂತ್ಯಗೊಂಡಿದ್ದು, ಗಡುವು ಮುಗಿದರೂ ಯಾವುದೇ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಭಾರತ ತಾನೇ ತಾನಾಗಿ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.
 
 
ಒಡಿಶಾ ತೀರದ ನೆಲೆಯಲ್ಲಿ ಕಳೆದ ನವೆಂಬರ್ 27ರಂದು ನಡೆದಲ ಅಗ್ನಿ 1 ಖಂಡಾಂತರ ಕ್ಷಿಪಣಿ ಪ್ರಯೋಗ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಭಾರತ ಈ ಒಕ್ಕೂಟಕ್ಕೆ ಸೇರುವ ಎಲ್ಲ ಅರ್ಹತೆಗಳನ್ನೂ ಪಡೆದಿದೆ.

LEAVE A REPLY

Please enter your comment!
Please enter your name here