ಎಂಆರ್‌ ಲಸಿಕೆ ಅಭಿಯಾನಕ್ಕೆ ಯಶಸ್ಸಿಗೆ ಸಾಥ್ ನೀಡಿ

0
178

ರಾಷ್ಟ್ರೀಯ ಪ್ರತಿನಿಧಿ ವರದಿ
ಮಕ್ಕಳಿಗೆ ತಗಲುವ ದಡಾರ ಮತ್ತು ರುಬೆಲ್ಲಾ ಎಂಬೆರಡು ಮಾರಕ ರೋಗಗಳನ್ನು ನಿರ್ಮೂಲನಗೊಳಿಸುವ ಸಲುವಾಗಿ ಕೇಂದ್ರ ಸರಕಾರ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಪ್ರಾರಂಭಿಸಿರುವ ಎಂಆರ್‌ ಲಸಿಕೆ ಅಭಿಯಾನಕ್ಕೆ ರವಿವಾರ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ.
 
 
 
ಫೆ.7ರಿಂದ ತೊಡಗಿ 28ರ ವರೆಗೆ ಕರ್ನಾಟಕದ ಜತೆಗೆ ತಮಿಳುನಾಡು, ಪಾಂಡಿಚೇರಿ, ಗೋವಾ, ಲಕ್ಷದ್ವೀಪಗಳಲ್ಲಿ ಈ ಅಭಿಯಾನ ನಡೆಯಲಿದೆ. ರಾಜ್ಯದ ಸುಮಾರು 1.6 ಕೋಟಿ ಮಕ್ಕಳೂ ಸೇರಿದಂತೆ ಒಟ್ಟಾರೆ ಸುಮಾರು 3.6 ಕೋಟಿ ಮಕ್ಕಳಿಗೆ ಚುಚ್ಚುಮದ್ದಿನ ರೂಪದಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ.
 
 
 
9 ತಿಂಗಳಿಂದ ಹಿಡಿದು 15 ವರ್ಷದ ನಡುವಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಏರ್ಪಾಡು ಮಾಡಲಾಗಿದೆ. ಪೋಲಿಯೊ ಬಳಿಕ ಅತ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಲಸಿಕೆ ಕಾರ್ಯಕ್ರಮವಿದು.

LEAVE A REPLY

Please enter your comment!
Please enter your name here