ಎಂಆರ್‌ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ

0
142

ರಾಷ್ಟ್ರೀಯ ಪ್ರತಿನಿಧಿ ವರದಿ
ಇನ್ಮುಂದೆ ವಿಮಾನ ನಿಲ್ದಾಣ, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‌ಗಳಲ್ಲಿ ನಿಗದಿತ ವೌಲ್ಯಕ್ಕಿಂತ (ಎಂಆರ್‌ಪಿ) ಹೆಚ್ಚಿನ ಬೆಲೆಗೆ ಕುಡಿಯುವ ನೀರು ಹಾಗೂ ತಂಪು ಪಾನೀಯಗಳನ್ನು ಮಾರಾಟ ಮಾಡುವಂತಿಲ್ಲ.
 
 
ಹೌದು. ಒಂದು ವೇಳೆ ಎಂಆರ್‌ಪಿ ಬೆಲೆಗಿಂಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಎಚ್ಚರಿಸಿದ್ದಾರೆ.
 
 
ಎಂಆರ್‌ಪಿಗಿಂತ ಅಕ ಬೆಲೆಗೆ ಮಾರುವುದು ಕಾನೂನಿನ ಉಲ್ಲಂಘನೆ. ಆದರೆ ಕೆಲವೆಡೆ ಹೀಗೆ ಮಾಡುತ್ತಾರೆ. ಇಂತಹ ಅಕ್ರಮ ನಿಲ್ಲಬೇಕು. ಇಲ್ಲದಿದ್ದರೆ ಅವರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಸಬೇಕು ಎಂದು ಪಾಸ್ವಾನ್ ಹೇಳಿದ್ದಾರೆ.
 
 
ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಈ ಬಗ್ಗೆ ಗ್ರಾಹಕರೂ ದೂರು ಸಲ್ಲಿಸಬಹುದು ಎಂದು ಪಾಸ್ವಾನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here