ಊಟದಸುತ್ತಾ ಒಂದು ಓಟ

0
461

ಮಸೂರ ಅಂಕಣ: ಆರ್ ಎಂ ಶರ್ಮ
ಊಟ ಯಾರಿಗೆ ಬೇಡಾ? ಯಾರಿಗೆ ಬೇಕು?
ಇದೇ ಈಗಿನ ಪ್ರಸ್ತುತಿಯ ತಿರುಳು-ತರಳೆಗಳನ್ನು ಅಳಿಸಲು.
ಊಟ ಏನು ಎಂದರೆ-ಹೊಟ್ಟೆಗೆ ಆಧಾರ-ಆಹಾರ.
ಕನ್ನಡದ ಗಾದೆ ಊಟಕ್ಕೆ-
“ಊಟ ತನ್ನಿಛ್ಚೆ ನೋಟ ಪರರಿಛ್ಚೆ!”,
“ಊಟ ಬಲ್ಲವನಿಗೆ ರೋಗವಿಲ್ಲ,ಮಾತು ಬಲ್ಲವನಿಗೆ ಜಗಳವಿಲ್ಲ!”
“ಹೊಟ್ಟೆಗೆ ಹಿಟ್ಟು!”
ಸಂಸ್ಕೃತದ ಮಾತು-“ಉದರ ನಿಮಿತ್ತಂ ಬಹುಕೃತ ವೇಷಂ.”,
ಪರಾತ್ಪರನ ಮಾತು,ತಾನೇ ವೈಶ್ವಾನರನಾಗಿ ಎಲ್ಲರಲ್ಲು ಉಪಸ್ಥಿತನಿದ್ದು ತಿಂದ ಆಹಾರವನ್ನು ಪಚನ ಮಾಡುತ್ತೇನೆ ಎಂತ.
ಭೂರಿ ಭೋಜನ,ಷಡ್ರಸೋಪೇತ,ಪಷ್ಕಳವಾದ ಆಹಾರ,ಅನ್ನಬ್ರಹ್ಮ ಇತ್ಯಾದಿ ಸಂಗತಿಗಳು ಊಟಕ್ಕೆ ಪರಮ ಸಖ್ಯ,ಸೌಖ್ಯಕೂಡಾ.
ಊಟಕ್ಕೆ ಮಿತಿ- ಒಂದು ಹೊತ್ತು ಯೋಗಿ,
– ಎರಡುಹೊತ್ತು ಭೋಗಿ,
-ಮೂರುಹೊತ್ತು ರೋಗಿ,
ನಾಲ್ಕು ಹೊತ್ತು ಹೊತ್ತುಕೊಂಡು ಹೋಗಿ!
ತಾತ್ಪಯ೯ ಮಿತಿಯಲ್ಲಿ ಮತಿ ಗತಿ, ಮಿತಿ ಮೀರಿದರೆ ಅವನತಿ -ಅಧೋಗತಿ-ಪ್ರಾಣಾಪಹರಣ.
ಊಟಕ್ಕೆ ವಯಸ್ಸು,ಶಾರಿರಿಕ ಶ್ರಮ,ಸಮಯ,ಸಂಗಾತಿ ಹೀಗೇ ಹಲವು ಅಂಶಗಳು ಮೂಲಾಧಾರವೆನ್ನುವುದರಲ್ಲಿ ನ್ಯಾಯವಿದೆ,ನಿಯಮವಿದೆ.
ತೀರ ಸರಳ,ಸಹಜ-ಪರಿಸರ,ಪರಸ್ಪರ,ಪರಾತ್ಪರ ಎಲ್ಲವೂ ಏರುಪೇರಾಗಲು ಕಾರಣವಾಗದೇ ಇರಲಾರದು.
ಏರುಪೇರು-ಬಲ್ಲಿದರನ್ನು ಬಲವಿಲ್ಲದವರನ್ನಾಗಿಸದೇ ಇದ್ದೀತೇ?
ಇಲ್ಲ ಖಂಡಿತವಾಗಿಯೂ ಇಲ್ಲ ಅದೇ ಉತ್ತರ.
ಏರುಪೇರು ಸತ್ಯ,ಸರಿಪಡಿಸುವುದು,ಸರಿಪಡಿಸಿಕೊಳ್ಳುವುದು ಅನಿವಾಯ೯.
ಅಲ್ಲಿಗೆ ರೋಗ,ಉಪಶಮನ ಎರಡೂ ಸಿದ್ಧ-ಬದ್ಧ-ಇಲ್ಲೆ ಪ್ರಭುದ್ದತೆ.
ಊಟಮಾಡುವಾಗ ಸಂತೋಷವಾಗಿರಬೇಕು ಎನ್ನುತ್ತದೆ ಆಯ೯ವಾಕ್.
ಕಾರಣ ಊಟ-“ಅನ್ನಂ-ತದ್ವ್ರತಂ.”
ವ್ರತ-ಪೂಜೆ-ಪೂಜ್ಯಭಾವ,ಚಿಂತನೆ ಸದಾ ವೇದ್ಯ.
ಈಶ್ವರೀಭಾವ-“ತದೇವ ಈಶ್ವರ ಪೂಜನಂ.” ಯಾವುದಕ್ಕೆ ಎಂದರೆ-
“ಸಂತೋಷಂ ಜನಯೇತ್ ಪ್ರಾಜ್ನ~ಃ.”-ಎನ್ನುತ್ತದೆ ನೀತಿ.
ಸಂತೋಷ ಉಂಟುಮಾಡಲು ಸಂತೋಷವಾಗದೇ ಇದ್ದರೆ ಆಗುತ್ತದೆಯೇ?
ಅಲ್ಲೇ ಇದೆ ಜಾಣತನ ಅಷ್ಟೇ.
ಊಟಕ್ಕೆ ಮತ್ತೂ ಹಿತವಿದೆ-
“ಮಿತಭುಕ್,ಹಿತಭುಕ್, ಋತುಹುಕ್”
ಮಿತಕ್ಕೆ-ಹಿತಕ್ಕೆ-ಋತುವಿಗೆ-“ಸಾತ್ವಿಕ,ರಾಜಸ,ತಾಮಸ ಎಂಬ ಆಹಾರ ಪ್ರಭೇದಗಳೂ ಉಂಟಪ್ಪ.
ಹತೋಟಿಗೆ-ಚಾಂಚಲ್ಯ,ಚಾಪಲ್ಯ-ನಾಲಿಗೆಗೆ ಸಲ್ಲದು.
ಊಟ-ಉತ್ತಮ ಆರೋಗ್ಯ-ಉತ್ತಮ ದೇಹ-ಧಮ೯ಸಾಧನೆಗೆ ಸೋಪಾನ-ಇದೇ ಆಹಾರಕ್ಕೆ ಬೇಕಾದ ಜೋಪಾನ.
ಈ ಜೋಪಾನಕ್ಕೆ-ಪಾನವಿದೆ,ಅಪಾನವಿದೆ-ಅಪಾಯವನ್ನು ಲೆಕ್ಕಿಸದಿದ್ದರೆ.
ಈಗೆಲ್ಲ-ಜೀವನ-ಜೀವನಶೈಲಿ,ಖಯಾಲಿ,ತಯಾರಿ,ಜವಾಬ್ದಾರಿ ಇತ್ಯಾದಿ ಘಟಕಗಳು-ಸಾಧಕಗಳು ಇಲ್ಲವೇ ಭಾದಕಗಳು ಪರಿಣಾಮ ಛೇದಕಗಳು.
ತದನಂತರ-ವಿಪರೀತ-ವೈಪರೀತ್ಯ-ವ್ರಾತ್ಯ.
ವಾತ್ಸಲ್ಯ ಮಾಯ,ಗಾಯವೇ ಸಂಪಾದನೆ.
ಇಷ್ಟೆಲ್ಲಾ ಚರಿತ್ರೆ-ಚಾರಿತ್ರ್ಯ-ಊಟಕ್ಕೆ.
ಹಾಗಾದರೆ ಕೂಟಕ್ಕೆ-ಬೇಡವೇ ನಿಧಾನಗಳು-ವಿಧಾನಗಳು?
ಓಮ್ದು ತೀರಾ ಸಾಮಾನ್ಯ ವಸ್ತು-ಕೊತ್ತಂಬರಿ-ಬೀಜ,ಸೊಪ್ಪು ಇಲ್ಲಿದೆ ಒಪ್ಪುವ ಕಪ್ಪ-ಕಾಣಿಕೆ-ದೇಣಿಗೆ-ಆರೋಗ್ಯಕ್ಕೆ-ಮನುಷ್ಯನ ಜೀವನ ಸಂಗಾತಿ.
ಅಡುಗೆಮನೆಯ ಒಡವೆ-ಕೊತ್ತಂಬರಿ-ಸಾರು,ಹುಳಿ,ಗೊಜ್ಜು,ಪಲ್ಯ,ಕೋಸಂಬರಿ,ಉಪ್ಪಿಟ್ಟು,ಬೋಂಡಾ,ವಡೇ-ಇಲ್ಲೆಲ್ಲಾ ನಾಲಿಗೆಗೆ ಹಿತಕ್ಕೆ,ಪದಾಥ೯ದ ಸೊಗಸಿಗೆ ಚನ್ನ,ಚಿನ್ನ.
ಪಾನಕ್ಕೂ ಸಲ್ಲುತ್ತದೇ-ಸಲ್ಲುತ್ತಿತ್ತು-ಸಂದಿತು-ನಂತರ ಸರಿಯಿತು-ಅದೇ ಈ ಚಿಂತನೆಯ ಆತ್ಮ.
ನಮ್ಮ ಬಾಲ್ಯದ ದಿನಗಳಲ್ಲಿ ಕೊತ್ತಂಬರಿ ಕಷಾಯ-ಈಗಿನ ಕಾಫ಼ಿಗೆ ಬದಲಾಗಿ ಒದಗುತ್ತಿದ್ದ,ಒದಗಲ್ಪಡಿಸುತ್ತಿದ್ದ ಪೇಯ.
ಕೊತ್ತಂಬರಿ ಬೀಜದ-ಪುಡಿ-ನೀರಿಗೆ ಬೆರಸಿ,ರುಚಿಗೆ ಬೆಲ್ಲ-ಚನ್ನಾಗಿ ಕುದಿಸಿ-ಶೋಧಿಸಿ-ಸೇವಿಸಲು ನೀಡುತ್ತಿದ್ದ ಪೇಯ.
ಮನೆಗಳಲ್ಲಿ,ದೇವಸ್ಥಾನಗಳಲ್ಲಿ,ಸಮಾರಂಭಗಳಲ್ಲಿ ಮೆರೆಯುತ್ತಿದ್ದ ವೈಭವ.
ಕಾಲ ಮುಂದುವರೆಯಿತು,ಜನ,ಜೀವನ ಬದಲು-ಅದಲು ಬದಲು ಕೊತ್ತಂಬರಿ ಕಷಾಯ ಮಾಯ,ಕಾಫ಼ಿ,ಚಹಾ ಇತ್ಯಾದಿ ಪೇಯಗಳ ನ್ಯಾಯ.
ನಾಗರಿಕತೆ ಮೆರೆಯಿತು,ವೈಚರಿಕತೆ ಅಳಿಯಿತು,ಆರೋಗ್ಯಕ್ಕೆ ಮನೆಮದ್ದು ಸದ್ದಡಗಿ ಮರುಗಿತು,ಮಲಗಿತು,ಕೊರಗಿತು.
ಈಗಷ್ಟೇ ಒಂದೆರಡು ದಿನಗಳ ಹಿಂದೆ ಇಂಗ್ಲಿಶ್ ಪತ್ರಿಕೆ ದೆಕ್ಕನ್ ಹೆರಾಲ್ಡ್ ನಲ್ಲಿ ಒಂದು ಲೇಖನ ಓದಿದಾಗ ನಮ್ಮ ಹಳೆಯ ಮೈತ್ರಿಯ-ಮಿತ್ರನ-ಕೊತ್ತಂಬರಿ ಕಷಾಯದ ನೆನಪು ಎಚ್ಚರಿಸಿತು-ಪ್ರೇರಿಪಿಸಿತು-ಬರೆಯಿಸಿತು ಈ ಪ್ರಸ್ತುತಿಯನ್ನು.
ಅಜ್ಜಿ,ಅಮ್ಮನ ತಿಳುವಳಿಕೆ ಬಸವಳಿಯಿತು,ಆಹಾರ ತಜ್ನ~/ತಜ್ನೆ~-ಇವರ ಮಧ್ಯಪ್ರವೇಶ -ಪ್ರಾಪ್ತಿಸಿತು.
ಈಗ ಜಾಣತನದ ಮಾತು-ವಿಶೇಷ ಪರಿಣಿತಿ ಪರಿಣಾಮಕಾರಿ.
ಇದನ್ನೇ ಸಂಸ್ಕೃತದಲ್ಲಿ-“ಪುನರಾಯಾನ್ಮಹಾ ಕಪಿಃ.”-
ಎಂತ ಹೇಳುವುದು ವಾಡಿಕೆ.
ಕೊತ್ತಂಬರಿಯಲ್ಲಿ,ರುಚಿಗೆ ಮೀರಿ ಔಷಧೀಯ ಗುಣಗಳಿವೆ ಎಂತ ಪರಿಣಿತರ ಸಂಶೋಧನೆ.ಕೊತ್ತಂಬರಿ ಸೊಪ್ಪು, ಬೀಜ,ಬೀಜದಪುಡಿ-
ಹೀಗೆ ವಿವಿಧ ರೂಪಗಳಲ್ಲಿ ಸೇವನೆ-
ಆರೋಗ್ಯ ವೃದ್ಧಿಗೆ ಇಂಬು ಏಂತ ಸಂಶೋಧನೆಗಳು ಸಾಬೀತು ಪಡಿಸಿ ಪಟ್ಟಿಮಾಡೀವೆ.
ಈಗ ಕೊತ್ತಂಬರಿಯ ಭವ್ಯ ಔಷಧೀಯ/ಔಪಯೋಗಿಕ ಗುಣಗಾಕ್ಕೆ ಒದಗೋಣ-
ಅವು-ಮಧುಮೇಹಕ್ಕೆ ಔಷಧಿ,ಉತ್ತಮಪಚನಕ್ರಿಯೆಗೆ ಸಹಕಾರಿ,ಬಾಯಿಹುಣ್ಣುಗೆ ಮದ್ದು,ಮುಖದಮೇಲೆ ಕಾಣಿಸುವ ಮಡವೆಗಳಿಗೆ ರಾಮಬಾಣ,
ಒಣಚಮ೯ಕ್ಕೆ ಉಪಚಾರಮಾದಿ-ಕಾಂತಿಯುತಮಾಡುವಲ್ಲಿ ಸಿದ್ಧಹಸ್ತ,
ಕಬ್ಬಿಣದ ಅಂಶ,ವಿಟಾಮಿನ್ ಗಳಾದ-ಎ,ಬಿ,ಐ,ಬಿ೨,ಸಿ ಇವುಗಳ ಪೂರೈಕೆ,
ಹುಳಿತೇಗು ನಿವಾರಣೆ,ಮೂತ್ರಜನಕಾಂಗಗಳ ಕಾಯ೯ಕ್ಷಮತೆಯಲ್ಲಿ ಚುರುಕುತನ,
ಅಡುಗೆಗೆ ಅಷ್ಟೇ ಅಲ್ಲ-ಹಸಿವಿನಲ್ಲಿಯೂ ಅಭಿವೃದ್ಧಿ,
ಒಟ್ಟಿನಲ್ಲಿ ಕೊತ್ತಂಬರಿಗೆ ಇದೆ ವಿರಾಟ್ ರೂಪ-ವಿಶ್ವರೂಪ,
ಧನ್ಯವಾದ ಕೊತ್ತಂಬರಿ-ಏನು ಚಮತ್ಕಾರ-ಅದಕ್ಕೇ ಜೈಕಾರ.
ಇದೇ ಈಗ ಶೋಷಣೆಗೆ ಕಡಿವಾಣ.
ಹಳೆಯದರ ಗೆಳೆತನ-ಸ್ವಾಸ್ಥ್ಯದ ಜತೆಗೆ-ಇನ್ನಿಲ್ಲ ವ್ಯಥೆ.
ಹಳೆಯದು ಹೊಸತಾಯಿತು-ಹೊಳೆಯಿತು-ಮೊಳೆಯಿತು-ಮೆರೆಯಿತು.
ಭೂತ-ವತ೯ಮಾನಕ್ಕೆ ಬಂದು-ಭವಿಷ್ಯತ್ತಿಗೆ ಬಂಧುವಾಗಿ-ಸಿಂಧುವಾಗಿ -ಸಾಧುವಾಗಿ-ಸಾಧ್ಯವದದ್ದೇ-ಈ ಕೊತ್ತಂಬರಿಯ-
“ನಿರಾಡಂಬರ ಪುರಾಣ.”
ಸಾಂಬಾರದಲ್ಲಿ-ಸಂಸಾರ,ಉದ್ಧಾರ,ಆಧಾರ-ಇವೇನು ಆಡಂಬರವೇ-ಆಭರಣವೇ ಎಂದರೆ-
ಪರಾತ್ಪರದ ಸೃಷ್ಟಿಯಲ್ಲಿ-ಅವಾಂಛಿತ,ಅನಪೇಕ್ಷಿತ,ಉಪೇಕ್ಷಿತ,ಕಶ್ಚಿತ್-ಇರುವುದರಲ್ಲಿ-ಎಲ್ಲೆಲ್ಲೂ-ಯಾವಾಗಲೂ-
“ಸವಾ೯ಂಸ್ಥತ, ಸವ೯ಭೂತೆರತಃ”-
ಇದೇ ಪಾರಮ್ಯ,ಪೌರುಷ.
ಕೊತ್ತಂಬರಿ, ಕಾದಂಬರಿಯಾಗಿ ಇಲ್ಲಿ ಧನ್ಯತೆ-ಈ ಚರಿತೆ.
ಪರಾತ್ಪರದ ವೇದವಾಕ್-“ಅಣೋರಣಿಯಾನ್”-ಸೊಪ್ಪಿನಲ್ಲಿ-ಕೊತ್ತಂಬರಿ,ಬೀಜವಾಗಿ,ಪುಡಿಯಾಗಿ-ಪುಟಿದೆದ್ದ ಜೈತ್ರಯಾತ್ರೆ ಈ ಗಾಥೆಯ ಯಾತ್ರೆ.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here