ಉಳಿದ ಉಗ್ರರಿಗಾಗಿ ಮುಂದುವರಿದ ಕಾರ್ಯಾಚರಣೆ

0
295

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಸರ್ಕಾರಿ ಕಚೇರಿಗೆ ದಾಳಿ ಮಾಡಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಓರ್ವ ಉಗ್ರನನ್ನು ಹತ್ಯೆಗೈಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
 
 
 
ಕಟ್ಟಡದಲ್ಲಿ ನುಸುಳಿ ದಾಳಿ ಮಾಡುತ್ತಿರುವ ಉಗ್ರರ ವಿರುದ್ಧ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಭಾರತೀಯ ಸೇನೆ ದಾಳಿ ಮಾಡುತ್ತಿದ್ದು, ನಿನ್ನೆ 50ಕ್ಕೂ ಹೆಚ್ಚು ರಾಕೆಟ್ ಗಳು, ಮೆಷಿನ್ ಗನ್ ಹಾಗೂ ಗ್ರೆನೇಡ್ ಗಳ ಮೂಲಕ ಕಟ್ಟಡದಲ್ಲಿ ದಾಳಿ ನಡೆಸಿದ್ದಾರೆ. ಸೇನಾಪಡೆಗಳು ಸಿಡಿಸಿದ ರಾಕೆಟ್ ದಾಳಿಯಲ್ಲಿ ಓರ್ವ ಉಗ್ರಗಾಮಿ ಹತನಾಗಿರಬಹುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
 
 
ಕಟ್ಟಡದಲ್ಲಿ ಇನ್ನೂ ಇಬ್ಬರು ಉಗ್ರಗಾಮಿಗಳು ಅಡಗಿ ಕುಳಿತಿರುವ ಶಂಕೆ ಇದ್ದು, ಪ್ರಸ್ತುತ ಸೇನಾಪಡೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಉಗ್ರರು ಗುಂಡು ಸಿಡಿಸುವುದನ್ನೇ ಕಾದು ನೋಡುತ್ತಿರುವ ಸೈನಿಕರು ಗುಂಡು ಹಾರಿಬರುವ ಜಾಗಕ್ಕೆ ಪ್ರತಿದಾಳಿ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here