ಉರುಳುಸೇವೆ ಆಧಾರ್ ಕಡ್ಡಾಯ

0
396

 
ರಾಷ್ಟ್ರೀಯ ಪ್ರತಿನಿಧಿ ವರದಿ
ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಹೌದು ಇನ್ಮುಂದೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಅಂಗಪ್ರದಕ್ಷಿಣಂ(ಉರುಳು ಸೇವೆ) ಮಾಡಲು ಬಯಸುವ ಭಕ್ತರು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಒಯ್ಯಬೇಕು.
 
 
ಉರುಳು ಸೇವೆ ಮಾಡುವ ಭಕ್ತರಿಗೆ ಜುಲೈ 20ರಿಂದ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ದೇವಸ್ಥಾನದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಲರಿ ರವಿ ಅವರು ಹೇಳಿದ್ದಾರೆ.
 
ಭದ್ರತೆಯ ದೃಷ್ಟಿಯಿಂದ ಹಾಗೂ ಭಕ್ತರು ಪದೇಪದೆ ಉರುಳು ಸೇವೆ ಮಾಡುವುದನ್ನು ತಪ್ಪಿಸಲು ಮತ್ತು ಬೇರೆಯವರಿಗೆ ಅವಕಾಶ ನೀಡುವ ಉದ್ದೇಶದಿಂದ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
 
 
ಆಧಾರ ಸಂಖ್ಯೆ ಬಳಸಿ ಅಂಗಪ್ರದಕ್ಷಿಣೆ ಟಿಕೆಟ್ ಪಡೆದ ಭಕ್ತರ ಮಾಹಿತಿಯನ್ನು ದಾಖಲಿಸಲಾಗುವುದು. ಇವರು ಪುನಃ ಅಂಗಪ್ರದಕ್ಷಿಣೆಗೆ ಬಂದರೆ ಟಿಕೆಟ್ ಖರೀದಿಸುವಾಗ ಇವರನ್ನು ತಡೆಲಾಗುತ್ತದೆ ಎಂದು ವಿವರಿಸಿದರು.
 
 
ಸುಮಾರು 2000 ವರ್ಷಗಳಿಂದ ದೇವಸ್ಥಾನದ ಗರ್ಭಗುಡಿಯ ಸುತ್ತಮುತ್ತ ಹರಕೆ ಹೊತ್ತುಕೊಂಡ ಭಕ್ತರು ಉರುಳು ಸೇವೆಯನ್ನು ಮಾಡುವುದು ಪದ್ಧತಿಯಾಗಿ ಬೆಳೆದುಬಂದಿದೆ.

LEAVE A REPLY

Please enter your comment!
Please enter your name here