'ಉರಿ' ದಾಳಿಗೆ ತಕ್ಕ ಉತ್ತರ

0
285

ರಾಷ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರ ಗಡಿಯಲ್ಲಿ ಸೇನೆ ತೀವ್ರ ಕಟ್ಟೆಚ್ಚರ ವಹಿಸಿದೆ. ಭಾರತೀಯ ಸೇನೆಯಿಂದ 20 ಬಾರಿ ನುಸುಳುವಿಕೆ ಪ್ರಯತ್ನಗಳನ್ನು ತಡೆಯಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ತಿಳಿಸಿದ್ದಾರೆ.
 
 
 
ಸೇನಾ ಕಾರ್ಯಾಚರಣೆ ಬಗ್ಗೆ ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ಮಹಾನಿರ್ದೇಶಕ ಸಿಂಗ್ ಅವರು, ಭಾರತ-ಪಾಕ್ ಗಡಿಯಲ್ಲಿ ಒಳನುಸುಳುವಿಕೆ ಯತ್ನ ಹೆಚ್ಚಾಗಿದೆ. ಈ ಬಗ್ಗೆ ಪಾಕಿಸ್ತಾನದ ಡಿಜಿಎಂಒ ಜೊತೆ ನಾನು ಚರ್ಚೆ ನಡೆಸಿದ್ದೇನೆ. ಒಳನುಸುಳುವಿಕೆ, ಗಡಿಭಾಗದ ಚಟುವಟಿಕೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ ಒಸಿ ಯಲ್ಲಿ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಲಾಗುತ್ತದೆ.
ಪಾಕ್ ವಿರುದ್ಧ ಭಾರತ ಸಾಕಷ್ಟು ಸಾಕ್ಷ್ಯಧಾರಗಳನ್ನು ನೀಡಿದೆ. ಪಾಕಿಸ್ತಾನದ ನಿಗದಿತ ಪ್ರದೇಶಗಳ ಮೇಲೆ ನಡೆಸಲು ನಿರ್ಧರಿಸಲಾಗಿದೆ. ಇದು ಪಾಕ್ ವಿರುದ್ಧ ಭಾರತದ ಮಹತ್ವದ ನಿರ್ಧಾರವಾಗಿದೆ.
 
 
ಉಗ್ರರ ಖಚಿತ ಮಾಹಿತಿ ಮೇರೆಗೆ ಕಳೆದ ರಾತ್ರಿ ಪಾಕ್ ಆಕ್ರಮಿತ ಪ್ರದೇಶವಾದ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ನಡೆದಿದೆ. ದಾಳಿ ನಡೆಸಿರುವ ಬಗ್ಗೆ ಪಾಕ್ ಸೇನೆಗೂ ಮಾಹಿತಿ ರವಾನೆಯಾಗಿದೆ. ಯಾವುದೇ ಕಾರಣಕ್ಕೂ ಗಡಿನುಸುಳುವಿಕೆಗೆ ಅವಕಾಶ ನೀಡಲ್ಲ. ಉರಿ ದಾಳಿಕೆ ತಕ್ಕ ಉತ್ತರ ನೀಡುತ್ತೇವೆ. ಉಗ್ರರ ನೆಲೆಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಹಲವು ಉಗ್ರರನ್ನು ಸೇನೆ ಹೊಡೆದುರುಳಿಸಲಾಗಿದೆ. ಉಗ್ರರು ಉಗ್ರರ ಬೆಂಬಲಿಗರು, ಮೂಲಸೌಕರ್ಯಕ್ಕೆ ಹಾನಿಯಾಗಿದೆ.
ಹಾನಿಯ ಕುರಿತು ಇಂದು ಬೆಳಗ್ಗೆ ಪಾಕ್ ಮಾಹಿತಿ ನೀಡಿದೆ. ಉಗ್ರರ ದಾಳಿ ತಡೆಗಟ್ಟಲು ಇನ್ನಷ್ಟು ಸೀಮಿತ ದಾಳಿ ಸಾಧ್ಯತೆ ಇದೆ. ಉಗ್ರರ ದಾಳಿ ಕುರಿತಾದ ಮಾಹಿತಿಗೆ ಸಂಬಂಧ ಪುರಾವೆ ಇದೆ. ಉಗ್ರರ ಬಗ್ಗೆ ಪಾಕಿಸ್ತಾನಕ್ಕೆ ಪುರಾವೆ ನೀಡಲು ನಾವು ಸಿದ್ಧ ಎಂದು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸುದ್ದಿಗೋಷ್ಠಿ ತಿಳಿಸಿದ್ದಾರೆ.
 
 
ಪಾಕ್ ಗೆ ಸುಳಿವೆ ಸಿಗದ ಹಾಗೆ ಉಗ್ರರ ಅಡಗುತಾಣಗಳ ಕಾರ್ಯಾಚರಣೆ ನಡೆದಿದೆ. ಅಜಿತ್ ದೋವಲ್ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆದಿದೆ. ಕೇಲ್ ಮತ್ತು ಭೀಮ್ ಬರ್ ನಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಸೀಮಿತ ದಾಳಿ ನಡೆಸಲಾಗಿದೆ.
 

ದಾಳಿ ನಡೆದ ಸ್ಥಳಗಳು
ದಾಳಿ ನಡೆದ ಸ್ಥಳಗಳು

LEAVE A REPLY

Please enter your comment!
Please enter your name here